×
Ad

ಮೃತ ಮಹಿಳೆಯ ಹೆಬ್ಬೆಟ್ಟು ಗುರುತು ಪಡೆದ ಸಂಬಂಧಿಕರು: ವಿಡಿಯೋ ವೈರಲ್‌

Update: 2023-04-11 20:15 IST

ಹೊಸದಿಲ್ಲಿ: ಮೃತ ಮಹಿಳೆಯ ಹೆಬ್ಬೆಟ್ಟು ಗುರುತನ್ನು ಆಕೆಯ ಸಂಬಂಧಿಕರು ಬಾಂಡ್‌ ಪೇಪರಿನಲ್ಲಿ ತೆಗೆದಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ವಿಡಿಯೋ 2021ರದ್ದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಮೊಮ್ಮಗ ಜಿತೇಂದ್ರ ಶರ್ಮಾ ಪೊಲೀಸರಿಗೆ ದೂರು ನೀಡಿದ್ದು, ಹೆಬ್ಬೆಟ್ಟು ಗುರುತನ್ನು ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

ಜಿತೇಂದ್ರ ಶರ್ಮಾರ ತಾಯಿಯ ಚಿಕ್ಕಮ್ಮ ಆಗಿದ್ದ ಕಮಲಾ ದೇವಿ ಮೇ 8, 2021 ರಂದು ನಿಧನರಾಗಿದ್ದರು. ಅವರ ಪತಿ ಮೊದಲೇ ನಿಧನರಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ, ಆಕೆಯ ಸೋದರಳಿಯ ಪುತ್ರರು ಆಕೆಯ ಮೃತದೇಹವನ್ನು ಆಗ್ರಾ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಹೇಳಿ ತೆಗೆದುಕೊಂಡು ಹೋಗಿದ್ದು ದಾರಿ ಮಧ್ಯೆ ಕಾರನ್ನು ನಿಲ್ಲಿಸಿ, "ನಕಲಿ ಉಯಿಲು" ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ನಕಲಿ ದಾಖಲೆ ಸೃಷ್ಟಿಸಿ ಮಹಿಳೆಯ ಮನೆ, ಅಂಗಡಿ ಸೇರಿದಂತೆ ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಮೊಮ್ಮಗ ಆರೋಪಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ

Similar News