×
Ad

ಬಿಜೆಪಿ ಧರ್ಮದ ಹೆಸರಿನಲ್ಲಿ ಎನ್‌ಕೌಂಟರ್‌ ನಡೆಸುತ್ತಿದೆ: ಅಸದುದ್ದೀನ್‌ ಉವೈಸಿ

Update: 2023-04-14 15:30 IST

ಹೈದರಾಬಾದ್:‌ 'ಬಿಜೆಪಿಯು (BJP) ಧರ್ಮದ ಹೆಸರಿನಲ್ಲಿ ಎನ್‌ಕೌಂಟರ್‌ಗಳನ್ನು ನಡೆಸುತ್ತದೆ,' ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸದುದ್ದೀನ್‌ ಉವೈಸಿ (Asaduddin Owaisi) ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ಪುತ್ರ ಅಸದ್‌ನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉವೈಸಿ ಮೇಲಿನಂತೆ ಪ್ರತಿಕ್ರಿಯಿಸಿದರು.

"ಜುನೈದ್‌ ಮತ್ತು ನಾಸೀರ್‌ನನ್ನು ಕೊಂದವರನ್ನು ಕೂಡ ಎನ್‌ಕೌಂಟರ್‌ನಲ್ಲಿ ಸಾಯಿಸಲಾಗುವುದೇ? ಇಲ್ಲ, ಏಕೆಂದರೆ ನೀವು ಧರ್ಮದ ಹೆಸರಿನಲ್ಲಿ ಎನ್‌ಕೌಂಟರ್‌ ನಡೆಸುವವರು," ಎಂದು ಓವೈಸಿ ಹೇಳಿದರು. ಫೆಬ್ರವರಿ 16 ರಂದು ರಾಜಸ್ಥಾನದ ಭರತಪುರ್‌ ಇಲ್ಲಿನ ಯುವಕರಾಧ ಜುನೈದ್‌ ಮತ್ತು ನಾಸಿರ್‌ ಅವರ ಸುಟ್ಟು ಕರಕಲಾದ ಮೃತದೇಹಗಳು ಹರ್ಯಾಣಾದ ಭಿವಾನಿ ಜಿಲ್ಲೆಯ ಕಾರೊಂದರ ಒಳಗೆ ಪತ್ತೆಯಾದ ಪ್ರಕರಣವನ್ನು ಉವೈಸಿ ಉಲ್ಲೇಖಿಸಿದ್ದಾರೆ.

"ಇದು ಕಾನೂನನ್ನು ಹರಿದಂತೆ. ನೀವು ಸಂವಿಧಾನದ ಎನ್‌ಕೌಂಟರ್‌ ಮಾಡಲು ಬಯಸುತ್ತೀರಿ. ನೀವು ಕಾನೂನನ್ನು ದುರ್ಬಲಗೊಳಿಸಲು ಬಯಸುತ್ತೀರಿ. ಮತ್ತೇಕೆ ನ್ಯಾಯಾಲಯಗಳು, ನ್ಯಾಯಾಧೀಶರು, ಕ್ರಿಮಿನಲ್‌ ದಂಡಸಂಹಿತೆ ಮತ್ತು ಐಪಿಸಿ? ಏಕೆ ಸಾರ್ವಜನಿಕ ಅಭಿಯೋಜಕರಿರಬೇಕು? ನೀವು ಬುಲೆಟ್‌ಗಳ ಮೂಲಕ ನ್ಯಾಯ ಒದಗಿಸಲು ತೀರ್ಮಾನಿಸಿದರೆ ಕೋರ್ಟುಗಳನ್ನು ಮುಚ್ಚಿಬಿಡಿ," ಎಂದು ಉವೈಸಿ ಹೇಳಿದರು.

ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಬೇಕಾಗಿರುವ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ಪುತ್ರ ಅಸದ್‌ ಎಂಬಾತನನ್ನು ಉತ್ತರ ಪ್ರದೇಶದ ಎಸ್‌ಟಿಎಫ್‌  ಝಾನ್ಸಿಯಲ್ಲಿ ಗುರುವಾರ ಎನ್‌ಕೌಂಟರ್‌ ನಲ್ಲಿ ಹತ್ಯೆಗೈದಿದ್ದಾರೆ.

ಇದನ್ನೂ: ಬಾಲಕನ ಬಟ್ಟೆ ಬಿಚ್ಚಿ 'ಜೈ ಶ್ರೀ ರಾಮ್‌' ಹೇಳುವಂತೆ ಬಲವಂತಪಡಿಸಿ ಹಲ್ಲೆ ನಡೆಸಿದ ಗುಂಪು

Similar News