ಯುವಕ ಆತ್ಮಹತ್ಯೆ
Update: 2023-04-14 20:47 IST
ಕುಂದಾಪುರ, ಎ.14: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಸೋಡು ಗ್ರಾಮದ ಗೋಪಾಲಕೃಷ್ಣ ಆಚಾರ್ ಎಂಬವರ ಮಗ ಪವನ್ ಜಿ.ಆಚಾರ್ (25) ಜೀವನದಲ್ಲಿ ಜಿಗುಪ್ಸೆಗೊಂಡು ಎ.12ರಂದು ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.