ಅಕ್ರಮ ಮದ್ಯ ನೀತಿ ಪ್ರಕರಣ: ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ಅರವಿಂದ ಕೇಜ್ರಿವಾಲ್

Update: 2023-04-16 09:15 GMT

ಹೊಸದಿಲ್ಲಿ: ಸದ್ಯ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರವಿವಾರ ಕೇಂದ್ರ ತನಿಖಾ ದಳದ ಕಚೇರಿಗೆ ಆಗಮಿಸಿದ್ದಾರೆ ಎಂದು The indian express ವರದಿ ಮಾಡಿದೆ.

ರವಿವಾರ ವಿಚಾರಣೆಗೆ ಹಾಜರಾಗುವ ಮೊದಲು, ಅರವಿಂದ ಕೇಜ್ರಿವಾಲ್ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರವು ಅತ್ಯಂತ ಶಕ್ತಿಶಾಲಿಯಾಗಿದೆ ಮತ್ತು ಅವರು ಅಪರಾಧ ಮಾಡಿದ್ದರೂ ಅಥವಾ ಮಾಡದಿದ್ದರೂ ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂದು ಹೇಳಿದರು.

"ನನ್ನನ್ನು ಬಂಧಿಸುವಂತೆ ಬಿಜೆಪಿಯು ಸಿಬಿಐಗೆ ಆದೇಶಿಸಿರಬಹುದು" ಎಂದು ಕೇಜ್ರಿವಾಲ್ ಹೇಳಿದರು. ಈಗ ಬಿಜೆಪಿ ಆದೇಶ ನೀಡಿದ್ದರೆ ಸಿಬಿಐ ಏನು ಮಾಡಲು ಸಾಧ್ಯ? ಅವರು ತಮ್ಮ ಅಧಿಕಾರದ ಬಗ್ಗೆ ಅತ್ಯಂತ ಅಹಂಕಾರಿಗಳಾಗಿ ಮಾರ್ಪಟ್ಟಿದ್ದಾರೆ. ಅವರು ನ್ಯಾಯಾಧೀಶರು, ಮಾಧ್ಯಮ ಪ್ರತಿನಿಧಿಗಳು, ರಾಜ್ಯ ಸರ್ಕಾರಗಳು, ಉದ್ಯಮಿಗಳವರೆಗೆ ಎಲ್ಲರಿಗೂ ಬೆದರಿಕೆ ಹಾಕುತ್ತಾರೆ" ಎಂದು ಕೇಜ್ರಿವಾಲ್‌ ಈ ಸಂದರ್ಭದಲ್ಲಿ ಹೇಳಿದರು.

ಸಿಬಿಐ ಶುಕ್ರವಾರ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿತ್ತು.

Similar News