×
Ad

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ: ಮಮತಾ ಬ್ಯಾನರ್ಜಿ

Update: 2023-04-16 15:07 IST

ಕೋಲ್ಕತ್ತಾ:  ಅತೀಕ್ ಅಹ್ಮದ್ ಹಾಗೂ  ಆತನ ಸಹೋದರನ  ಹತ್ಯೆಗಳ ಕುರಿತು ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ(Bengal CM Mamata Banerjee) "ಉತ್ತರ ಪ್ರದೇಶದಲ್ಲಿ ಅರಾಜಕತೆ ನೆಲೆಸಿದ್ದು, ಅಲ್ಲಿನ  ಕಾನೂನು ಹಾಗೂ  ಸುವ್ಯವಸ್ಥೆಯು ಸಂಪೂರ್ಣ ಕುಸಿತವಾಗಿದೆ. ಇದರಿಂದ  ನಾನು ಆಘಾತಕ್ಕೊಳಗಾಗಿದ್ದೇನೆ" ಎಂದು ಹೇಳಿದರು.

"ಪೊಲೀಸರು ಹಾಗೂ  ಮಾಧ್ಯಮದವರ ಕಣ್ತಪ್ಪಿಸಿ ದುಷ್ಕರ್ಮಿಗಳು ಈಗ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.  ಇಂತಹ ಕಾನೂನುಬಾಹಿರ ಕೃತ್ಯಗಳಿಗೆ ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ'' ಎಂದು ಮಮತಾ ಬ್ಯಾನರ್ಜಿ ರವಿವಾರ  ಟ್ವೀಟಿಸಿದ್ದಾರೆ.

Similar News