×
Ad

ಐಪಿಎಲ್: ಕೆಕೆಆರ್ ವಿರುದ್ಧ ಮುಂಬೈ ಜಯಭೇರಿ

ವೆಂಕಟೇಶ್ ಅಯ್ಯರ್ ಚೊಚ್ಚಲ ಶತಕ ವ್ಯರ್ಥ

Update: 2023-04-16 19:27 IST

 ಮುಂಬೈ, ಎ.16: ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅರ್ಧಶತಕದ(58 ರನ್, 25 ಎಸೆತ) ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ರವಿವಾರ ನಡೆದ 22ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಗೆಲ್ಲಲು 186 ರನ್ ಗುರಿ ಪಡೆದ ಮುಂಬೈ ಇಂಡಿಯನ್ಸ್ 17.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದೆ. ಟ್ವೆಂಟಿ-20 ಟೂರ್ನಿಯಲ್ಲಿ ತಾನಾಡಿದ 4ನೇ ಪಂದ್ಯದಲ್ಲಿ 2ನೇ ಗೆಲುವು ದಾಖಲಿಸಿದೆ.

 ಮೊದಲ ವಿಕೆಟಿಗೆ 65 ರನ್ ಜೊತೆಯಾಟ ನಡೆಸಿದ ರೋಹಿತ್ ಶರ್ಮಾ(20 ರನ್, 13 ಎಸೆತ)ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು.

ತಿಲಕ್ ವರ್ಮಾ(30 ರನ್, 25 ಎಸೆತ) ಜೊತೆ 3ನೇ ವಿಕೆಟಿಗೆ 60 ರನ್ ಜೊತೆಯಾಟದಲ್ಲಿ ಭಾಗಿಯಾದ ನಾಯಕ ಸೂರ್ಯಕುಮಾರ್ ಯಾದವ್(43 ರನ್, 25 ಎಸೆತ) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಟಿಮ್ ಡೇವಿಡ್(ಔಟಾಗದೆ 24 ರನ್, 13 ಎಸೆತ)ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೆಕೆಆರ್ ಪರ ಸುಯಶ್ ಶರ್ಮಾ(2-27)ಯಶಸ್ವಿ ಪ್ರದರ್ಶನ ನೀಡಿದರು. ಲಾಕಿ ಫರ್ಗ್ಯುಸನ್(1-19), ಶಾರ್ದೂಲ್ ಠಾಕೂರ್(1-25) ಹಾಗೂ ವರುಣ್ ಚಕ್ರವರ್ತಿ(1-38) ತಲಾ ಒಂದು ವಿಕೆಟ್ ಪಡೆದರು.
 

Similar News