ಯುವಕ ಆತ್ಮಹತ್ಯೆ
Update: 2023-04-16 20:52 IST
ಮಲ್ಪೆ: ಮೀನುಗಾರಿಕೆ ಕೆಲಸ ಇಲ್ಲದ ಕಾರಣ ಮನನೊಂದ ಆಂಧ್ರ ಪ್ರದೇಶ ಮೂಲದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಯ ಬಾಪುತೋಟ ಎಂಬಲ್ಲಿ ಎ.14ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಆಂದ್ರಪ್ರದೇಶ ಗಾಲ್ ರಾಜ್(26) ಎಂದು ಗುರುತಿಲಾಗಿದೆ. ಮದ್ಯ ಸೇವಿಸುವ ಚಟ ಹೊಂದಿದ್ದ ಗಾಲ್‌ರಾಜ್, ಕೆಲವು ದಿನಗಳಿಂದ ಮೀನುಗಾರಿಕೆ ಕೆಲಸ ವಿಲ್ಲದ ಕಾರಣ ಮಲ್ಪೆಯ ಬಾಪುತೋಟದ ಬಾಡಿಗೆ ರೂಮಿನಲ್ಲಿ ಒಬ್ಬನೆ ವಾಸವಾಗಿದ್ದನು. ಇದೇ ಚಿಂತೆಯಲ್ಲಿ ಗಾಲ್‌ರಾಜ್ ಬಾಡಿಗೆ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.