ಚುನಾವಣಾ ಆಯುಕ್ತರಾಗಿ ಅರುಣ ಗೋಯೆಲ್ ನೇಮಕ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಎಡಿಆರ್
Update: 2023-04-16 22:52 IST
ಹೊಸದಿಲ್ಲಿ,ಎ.16: ಚುನಾವಣಾ ಆಯುಕ್ತರಾಗಿ ಅರುಣ ಗೋಯೆಲ್ ನೇಮಕಾತಿಯನ್ನು ಪ್ರಶ್ನಿಸಿ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಇದು ನಿರಂಕುಶ ಕ್ರಮವಾಗಿದೆ ಮತ್ತು ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ ಮತ್ತು ಸ್ವಾತಂತ್ರದ ಉಲ್ಲಂಘನೆಯಾಗಿದೆ ಎಂದು ಅದು ಪ್ರತಿಪಾದಿಸಿದೆ.
ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗಾಗಿ ತಟಸ್ಥ ಮತ್ತು ಸ್ವತಂತ್ರ ಸಮಿತಿಯ ರಚನೆಯನ್ನು ಎಡಿಆರ್ ಕೋರಿದೆ. ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ತಮ್ಮ ‘ತಪ್ಪು ಒಪ್ಪುಗಳ’ ಕ್ರಿಯೆಗಳ ಮೂಲಕ ತಮ್ಮ ಸ್ವಂತ ಲಾಭಕ್ಕಾಗಿ ಎಚ್ಚರಿಕೆಯಿಂದ ಯೋಜಿಸಲಾದ ‘ಆಯ್ಕೆ ಪ್ರಕ್ರಿಯೆ’ಯಲ್ಲಿ ಪಾಲ್ಗೊಂಡಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.