ಕ್ರೌಡ್‌ಫಂಡಿಂಗ್ ಹಣ ದುರುಪಯೋಗ ಆರೋಪ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ಜಾಮೀನು ಮಂಜೂರು
Update: 2023-04-17 17:34 IST
ಹೊಸದಿಲ್ಲಿ: ಕ್ರೌಡ್‌ಫಂಡಿಂಗ್ ಮೂಲಕ ಸಂಗ್ರಹಿಸಲಾದ ಹಣವನ್ನು ದುರುಪಯೋಗಪಡಿಸಿದ್ದಾರೆಂಬ ಆರೋಪ ಕುರಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರಿಗೆ ಜಾಮೀನು ಮಂಜೂರುಗೊಳಿಸಿದೆ.
ಈ ಪ್ರಕರಣದಲ್ಲಿ ಈಗಾಗಲೇ ಚಾರ್ಚ್ ಶೀಟ್ ಸಲ್ಲಿಕೆಯಾಗಿರುವ ಕುರಿತೂ ಜಾಮೀನು ಮಂಜೂರುಗೊಳಿಸುವ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರ ಪೀಠ ನೆನಪಿಸಿದೆ.
ಗೋಖಲೆ ಅವರನ್ನು ಅಹ್ಮದಾಬಾದ್ ಸೈಬರ್ ಕ್ರೈಂ ಬ್ರ್ಯಾಂಚಿನ ಪೊಲೀಸರು ಕಳೆದ ವರ್ಷದ ಡಿಸೆಂಬರ್ 30 ರಂದು ಬಂಧಿಸಿದ್ದರು.
ಅವರ ವಿರುದ್ಧ ಐಪಿಸಿ ಸೆಕ್ಷನ್ 420, 406 ಮತ್ತು 467 ಅನ್ವಯ ಪ್ರಕರಣ ದಾಖಲಿಸಲಾಗಿದೆ.