×
Ad

ಈಗಿನ ರಾಜಕಾರಣಿಗಳು ಟೀಕೆಗೆ ಹೆಚ್ಚು ಅಸಹಿಷ್ಣುತೆ ತೋರುತ್ತಿದ್ದಾರೆ: ವೆಂಕಯ್ಯ ನಾಯ್ಡು

Update: 2023-04-17 19:10 IST

ಹೊಸದಿಲ್ಲಿ: ಈಗಿನ ರಾಜಕಾರಣಿಗಳು ಟೀಕೆಗೆ ಹೆಚ್ಚು ಅಸಹಿಷ್ಣುತೆ ತೋರುತ್ತಿದ್ದಾರೆ ಎಂದು ಹೇಳಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ರಾಜಕಾರಣಿಗಳು ತಮ್ಮ ವಿರುದ್ಧ ಕೇಳಿ ಬರುವ ಟೀಕೆಗಳನ್ನು ಸ್ವೀಕರಿಸಬೇಕು ಎಂದರು.

"ರಾಜಕಾರಣಿಗಳು ಪತ್ರಕರ್ತರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಒಪ್ಪದೇ ಇರಬಹುದು, ಆದರೆ ಟೀಕೆಗಳನ್ನು ಸ್ವೀಕರಿಸಬೇಕು ಮತ್ತು ಪತ್ರಕರ್ತರೂ ಸ್ವತಂತ್ರವಾಗಿ ರಾಜಕಾರಣಿಗಳನ್ನು ಮತ್ತು ಸಾರ್ವಜನಿಕ ವ್ಯಕ್ತಿಗಳನ್ನು ಟೀಕಿಸುವಂತಾಗಬೇಕು, ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿರುತ್ತದೆ," ಎಂದು ಹೈದರಾಬಾದ್‌ ಪ್ರೆಸ್‌ ಕ್ಲಬ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು. ಈ ಸಂದರ್ಭ ಗೋರ ಶಾಸ್ತ್ರಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ವಿಜೇತ ಎ ಕೃಷ್ಣ ರಾವ್‌ ಅವರಿಗೆ ಪ್ರದಾನ ಮಾಡಲಾಯಿತು.

ಹಲವಾರು ದೃಷ್ಟಿಕೋನಗಳನ್ನು ಒಪ್ಪಿಕೊಳ್ಳುವ ರಾಜಕಾರಣಿಗಳ ಸಂಖ್ಯೆಯೂ ಇತ್ತೀಚೆಗೆ ಕಡಿಮೆಯಾಗಿದೆ ಎಂದು ಹೇಳಿದ ನಾಯ್ಡು ಅದೇ ಸಮಯ, ಸುದ್ದಿಗಳಿಗೆ ಬಣ್ಣ ನೀಡುವ ಹಲವು ಪತ್ರಕರ್ತರ ಪ್ರವೃತ್ತಿಯನ್ನು ಅವರು ಟೀಕಿಸಿದರು,

Similar News