ಐಪಿಎಲ್: ಆರ್‌ಸಿಬಿಗೆ 227 ರನ್ ಗುರಿ ನೀಡಿದ ಚೆನ್ನೈ ಕಿಂಗ್ಸ್

ಡೆವೊನ್ ಕಾನ್ವೇ, ಶಿವಂ ದುಬೆ ಅರ್ಧಶತಕ

Update: 2023-04-17 15:56 GMT

 ಬೆಂಗಳೂರು, ಎ.17: ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ(83 ರನ್, 45 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಶಿವಂ ದುಬೆ(52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಐಪಿಎಲ್‌ನ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ 227 ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ. ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. 16 ರನ್‌ಗೆ ಋತುರಾಜ್ ಗಾಯಕ್ವಾಡ್ ವಿಕೆಟನ್ನು ಕಳೆದುಕೊಂಡಿತು. ಆಗ 74 ರನ್ ಜೊತೆಯಾಟ ನಡೆಸಿದ ಕಾನ್ವೆ ಹಾಗೂ ಅಜಿಂಕ್ಯ ರಹಾನೆ(37ರನ್, 20 ಎಸೆತ)ತಂಡವನ್ನು ಆಧರಿಸಿದರು.

ರಹಾನೆ ಔಟಾದ ನಂತರ ಶಿವಂ ದುಬೆ ಜೊತೆ ಕೈ ಜೋಡಿಸಿದ ಕಾನ್ವೇ ಅವರು 3ನೇ ವಿಕೆಟಿಗೆ 80 ರನ್ ಜೊತೆಯಾಟ ನಡೆಸಿದರು. ಮೊಯಿನ್ ಅಲಿ(ಔಟಾಗದೆ 18 ರನ್, 8 ಎಸೆತ) ಹಾಗೂ ಅಂಬಟಿ ರಾಯುಡು(14 ರನ್, 6 ಎಸೆತ)ತಂಡದ ಮೊತ್ತ ಹೆಚ್ಚಿಸಿದರು.

Similar News