ಅತೀಕ್ ಅಹ್ಮದ್ ಹತ್ಯೆ ಪ್ರಕರಣ: ಪ್ರತಾಪ್‌ಗಢ ಕಾರಾಗೃಹಕ್ಕೆ ಆರೋಪಿಗಳ ವರ್ಗಾವಣೆ
Update: 2023-04-17 22:21 IST
ಹೊಸದಿಲ್ಲಿ, ಎ. 17: ಭೂಗತ ಪಾತಕಿ ಅತಿಕ್ ಅಹ್ಮದ್ ಹಾಗೂ ಸಹೋದರ ಅಶ್ರಫ್ ಅಹ್ಮದ್‌ನನ್ನು ಗುಂಡು ಹಾರಿಸಿ ಹತ್ಯೆಗೈದ ಮೂವರು ಆರೋಪಿಗಳನ್ನು ಭದ್ರತಾ ಕಾರಣಕ್ಕಾಗಿ ಉತ್ತರಪ್ರದೇಶದ ಇನ್ನೊಂದು ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.
ಪೊಲೀಸ್ ಬೆಂಗಾವಲಿನಲ್ಲಿ ತೆರಳುತ್ತಿದ್ದ ಅತಿಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್‌ನನ್ನು ಹತ್ಯೆಗೈದ ಸನ್ನಿ ಸಿಂಗ್, ಅರುಣ್ ಮೌರ್ಯ, ಲವ್ಲೇಶ್ ತಿವಾರಿಯನ್ನು ಈ ಹಿಂದಿನ ಪ್ರಯಾಗ್‌ರಾಜ್‌ನ ನೈನಿ ಕಾರಾಗೃಹದಿಂದ ಪ್ರತಾಪ್‌ಗಢ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.
ನೈನಿ ಕಾರಾಗೃಹದಲ್ಲಿ ಈ ಮೂವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಬೇಹುಗಾರಿಕೆ ಇಲಾಖೆ ತಿಳಿಸಿದೆ.
ಈ ಮೂವರನ್ನು ಕಳೆದ ವಾರಾಂತ್ಯದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.