×
Ad

ಹರ್ಯಾಣ: ಕುಸಿದುಬಿದ್ದ 3 ಅಂತಸ್ತಿನ ರೈಸ್ ಮಿಲ್; ಹಲವು ಕಾರ್ಮಿಕರು ಸಿಲುಕಿರುವ ಭೀತಿ

Update: 2023-04-18 10:36 IST

ಕರ್ನಾಲ್ (ಹರ್ಯಾಣ): ಹರ್ಯಾಣದ ಕರ್ನಾಲ್‌ನಲ್ಲಿ ಮಂಗಳವಾರ ಮೂರು ಅಂತಸ್ತಿನ ಅಕ್ಕಿ ಗಿರಣಿ ಕಟ್ಟಡ ಕುಸಿದು ಬಿದ್ದ ನಂತರ ಹಲವಾರು ಅಕ್ಕಿ ಗಿರಣಿ ಕಾರ್ಮಿಕರು ಅವಶೇಷಗಳಡಿ ಸಿಕ್ಕಿಬಿದ್ದಿರುವ ಭೀತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಮಿಕರು ತಮ್ಮ ಪಾಳಿ ಮುಗಿದ ನಂತರ ಅಕ್ಕಿ ಗಿರಣಿಯಲ್ಲಿ ಮಲಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಅಗ್ನಿಶಾಮಕ ದಳ, ಪೊಲೀಸರು ಮತ್ತು ಆ್ಯಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Similar News