ಕರ್ನಾಟಕದಲ್ಲಿ ಮುಸ್ಲಿಂ ಕೋಟಾ ರದ್ದುಗೊಳಿಸುವುದರ ವಿರುದ್ಧದ ಅರ್ಜಿಗಳ ವಿಚಾರಣೆ ಎ.25ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

Update: 2023-04-18 06:35 GMT

ಹೊಸದಿಲ್ಲಿ : ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಉತ್ತರವನ್ನು ಸಲ್ಲಿಸಲು ಸಮಯ ಕೋರಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 4 ಶೇಕಡಾ ಮುಸ್ಲಿಂ ಕೋಟಾವನ್ನು ರದ್ದುಗೊಳಿಸುವುದರ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 25 ರವರೆಗೆ ಮುಂದೂಡಿತು.

ಎಲ್. ಗುಲಾಮ್ ರಸೂಲ್ ಮತ್ತು ಅಂಜುಮನ್-ಇ-ಇಸ್ಲಾಂ   ಸರಕಾರಿ ಆದೇಶವನ್ನು (ಜಿಒ) ಪ್ರಶ್ನಿಸುವ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ. ಎಂ. ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠವು ಮಂಗಳವಾರ ಕೈಗೆತ್ತಿಕೊಂಡಿತು.

ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸುವುದಿಲ್ಲ ಎಂದು ರಾಜ್ಯವು ಪ್ರತಿಪಾದಿಸಿದೆ.

ಪೀಠದಲ್ಲಿದ್ದ ಇನ್ನೋರ್ವ  ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ. ವಿ .ನಾಗರತ್ನ ಅವರು, ಮಧ್ಯಂತರ ವರದಿಯ ಆಧಾರದ ಮೇಲೆ ಸರಕಾರಿ ಆದೇಶ ನೀಡುವ ಬದಲು ರಾಜ್ಯವು ಅಂತಿಮ ವರದಿಗಾಗಿ ಕಾಯಬಹುದಿತ್ತು ಹಾಗೂ  “ಮಹಾ ತುರ್ತು”  ತಿಳಿಯಲು ಪ್ರಯತ್ನಿಸಬಹುದಿತ್ತು ಎಂದರು.

ಆದರೆ, ರಾಜ್ಯ ಸರಕಾರ ಹಾಗೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಕೆಲವು ಮುಖಂಡರ ಪರ ವಾದ ಮಂಡಿಸಿದ ವಕೀಲರು ಯಾವುದೇ ತಡೆಯಾಜ್ಞೆಯನ್ನು ವಿರೋಧಿಸಿದರು ಮತ್ತು ಉತ್ತರಿಸಲು ಕೆಲವು ದಿನಗಳ ಳ ಕಾಲಾವಕಾಶ ಕೋರಿದರು. ಅರ್ಜಿದಾರರು ಕೋರಿದ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ಪೀಠವು ನಿರಾಕರಿಸಿತು.

Similar News