×
Ad

ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈಯಲ್ಲಿ ಆರಂಭ

Update: 2023-04-18 13:18 IST

ಮುಂಬೈ: ಆ್ಯಪಲ್ (Apple) ತನ್ನ ಮೊದಲ ಅಧಿಕೃತ ಸ್ಟೋರ್ – ಆ್ಯಪಲ್ ಬಿಕೆಸಿ ಅನ್ನು ಮುಂಬೈಯಲ್ಲಿ ಆರಂಭಿಸಿದೆ. ಬಾಂದ್ರಾ ಕುರ‍್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿರುವ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿರುವ ಈ ಸ್ಟೋರ್, ಆ್ಯಪಲ್ ಆರಂಭಿಸಲಿರುವ ಎರಡು ಸ್ಟೋರ್‌ಗಳಲ್ಲಿ ಒಂದಾಗಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಂಡ ಈ ಸ್ಟೋರ್‌ನಲ್ಲಿ ಸುಮಾರು 20 ಭಾಷೆಗಳನ್ನು ಮಾತನಾಡಬಲ್ಲ 100 ಮಂದಿ ಉದ್ಯೋಗಿಗಳಿದ್ದಾರೆ. ಈ ದಿನದ ಕಾರ್ಯಕ್ರಮಗಳಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಭಾಗವಹಿಸಲಿದ್ದಾರೆ.

ಈ ಆ್ಯಪಲ್ ಸ್ಟೋರ್‌ನಲ್ಲಿ ಈ ಬೇಸಿಗೆ ಸಮಯದಲ್ಲಿ  ಸ್ಥಳೀಯ ಸಮುದಾಯ, ಸಂಸ್ಕೃತಿಯ ಸಮ್ಮಿಳಿತದೊಂದಿಗೆ ಆ್ಯಪಲ್ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಮಾಡಿಕೊಡಲಾಗುತ್ತದೆ. ಈ ಅತ್ಯಾಧುನಿಕ ಸ್ಟೋರ್‌ನಲ್ಲಿ ಆ್ಯಪಲ್ ಗ್ರಾಹಕರಿಗೆ ಎಲ್ಲಾ ಸವಲತ್ತುಗಳೂ ಇರಲಿವೆ. ಈ ವಾರ ಆ್ಯಪಲ್ ಉತ್ಪನ್ನಗಳು ಭಾರತಕ್ಕೆ ಆಗಮಿಸಿ 25 ವರ್ಷಗಳು ಸಂಪೂರ್ಣಗೊಳ್ಳುತ್ತಿದೆ.

Similar News