×
Ad

ಉಡುಪಿ: ಚುನಾವಣಾ ಕರ್ತವ್ಯ ನಿರ್ಲಕ್ಷ್ಯ; ಕೆ.ಪಿ.ದಯಾನಂದ ಅಮಾನತು

Update: 2023-04-18 20:31 IST

ಉಡುಪಿ, ಎ.18: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ 120 ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಟಪಾಡಿ, ಹಂದಾಡಿ, ಕುಮ್ರಗೋಡು ಮತ್ತು ವಾರಂಬಳ್ಳಿ  ಮತಗಟ್ಟೆಗಳಿಗೆ ಸೆಕ್ಟರ್ ಅಧಿಕಾರಿಯಾಗಿ  ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ಪ್ರವರ್ದನಾಧಿಕಾರಿ ಕೆ.ಪಿ.ದಯಾನಂದ ಇವರನ್ನು  ಜಿಲ್ಲಾ ಚುನಾವಣಾಧಿಕಾರಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದರು.

ಆದರೆ ಕೆ.ಪಿ.ದಯಾಂನದ್ ಚುನಾವಣಾ ಕರ್ತವ್ಯಕ್ಕೆ  ಹಾಜರಾಗದೇ, ನಿರ್ಲಕ್ಷ್ಯ ವಹಿಸಿ ದುರ್ನಡತೆ ತೋರಿದ್ದು, ಈ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಿದ್ದರೂ ಸಹ ಯಾವುದೇ ವಿವರಣೆ ನೀಡದೇ ಸೆಕ್ಟರ್ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗದೇ ಬೇಜವಾಬ್ದಾರಿತನದಿಂದ ವರ್ತಿಸಿರುವ ಹಿನ್ನಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಶಿಸ್ತು ಪ್ರಾಧಿಕಾರದ ನಿರ್ದೇಶಕರು ಹಾಗೂ ಜವಳಿ ಅಭಿವೃದ್ದಿ ಆಯುಕ್ತರಾಗಿರುವ ಟಿ.ಎಚ್.ಎಂ ಕುಮಾರ್ ಅವರು ಕೆ.ಪಿ. ದಯಾನಂದ್‌ರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Similar News