ಶಿರ್ಲಾಲು ಅರಸುಬೈಲು ನಿವಾಸಿಗಳಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
Update: 2023-04-18 22:03 IST
ಉಡುಪಿ: ಕಾರ್ಕಳ ತಾಲೂಕು ಅಜೆಕಾರು-ಶಿರ್ಲಾಲು ಸಂಪರ್ಕ ಕೊಂಡಿಯಾದ ಮಂಗಳಬಾಕ್ಕಾರು ಬಳಿ ಸರಕಾರದಿಂದ ಮಂಜೂರಾಗಿ 3.5 ಕೋಟಿ ರೂ.ವೆಚ್ಚದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಳೆದ 5 ತಿಂಗಳುಗಳಿಂದ ಗ್ರಾಮಸ್ಥರ ಸತತ ಮನವಿಯ ಹೊರತಾಗಿಯೂ ಸಂಪರ್ಕ ರಸ್ತೆಯನ್ನು ನಿರ್ಮಿಸದ ಹಿನ್ನೆಲೆಯಲ್ಲಿ ಶಿರ್ಲಾಲು ಗ್ರಾಮದ ಅರಸುಬೈಲು, ಜಡ್ಡು, ಗಾಂಧಿಬೆಟ್ಟುವಿನ ನಿವಾಸಿಗಳಾದ 100ಕ್ಕೂ ಅಧಿಕ ಮತದಾರರು ಮೇ 10ರ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಗ್ರಾಮಸ್ಥರು ತಮ್ಮ ಈ ನಿರ್ಧಾರವನ್ನು ಜಿಲ್ಲೆಯ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಬರೆದಿರುವ ಸಹಿ ಹಾಕಿದ ಪತ್ರದಲ್ಲಿ ತಿಳಿಸಿದ್ದಾರೆ.