​ನೇಪಾಳದ ಮೌಂಟ್ ಅನ್ನಪೂರ್ಣದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿ ಬಲ್ಜೀತ್ ಕೌರ್ ಜೀವಂತವಾಗಿ ಪತ್ತೆ

Update: 2023-04-19 06:35 GMT

ಹೊಸದಿಲ್ಲಿ:  ನೇಪಾಳದ ಮೌಂಟ್ ಅನ್ನಪೂರ್ಣದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಬಲ್ಜೀತ್ ಕೌರ್ ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ.

ವೈಮಾನಿಕ ಶೋಧ ತಂಡ ಕೌರ್ ಅವರನ್ನು ಕ್ಯಾಂಪ್ 4ರಲ್ಲಿ ಪತ್ತೆ ಹಚ್ಚಿದೆ ಎಂದು ಪಯೊನೀರ್ ಎಡ್ವಂಚರ್‌ನ ಅಧ್ಯಕ್ಷ ಪಸಂಗ್ ಶೆರ್ಪಾ ಅವರನ್ನು ಉಲ್ಲೇಖಿಸಿ ಹಿಮಾಲಯನ್ ಟೈಮ್ಸ್ ದಿನಪತ್ರಿಕೆ ವರದಿ ಮಾಡಿದೆ. 

ಕೌರ್ ಅವರು ಕ್ಯಾಂಪ್ ೪ರಿಂದ ಏಕಾಂಗಿಯಾಗಿ ಇಳಿಯುತ್ತಿರುವುದನ್ನು ವೈಮಾನಿಕ ಶೋಧ ತಂಡ ನೋಡಿದೆ ಎಂದು ಶೆರ್ಪಾ ಅವರು ತಿಳಿಸಿದ್ದಾರೆ.
ಎತ್ತರದ ಈ ಕ್ಯಾಂಪ್‌ನಿಂದ  ಕೌರ್ ಅವರನ್ನು ಏರ್ ಲಿಫ್ಟ್ ಮಾಡಲು  ಸಿದ್ಧತೆ ನಡೆಸುತ್ತಿದ್ದೇವೆ ಎಂದು ಅವರು ಶೆರ್ಪಾ ತಿಳಿಸಿದ್ದಾರೆ.

Similar News