ಶರದ್ ಪವಾರ್‌ರನ್ನು ಭೇಟಿಯಾದ ಗೌತಮ್ ಅದಾನಿ
Update: 2023-04-20 22:07 IST
ಮುಂಬೈ,ಎ.20: ಕೈಗಾರಿಕೋದ್ಯಮಿ ಗೌತಮ ಅದಾನಿಯವರು ಗುರುವಾರ ಎನ್ಸಿಪಿ ವರಿಷ್ಠ ಶರದ್ ಪವಾರ್ ರನ್ನು ಅವರ ಇಲ್ಲಿಯ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್ಬರ್ಗ್ ರೀಸರ್ಚ್ ಮಾಡಿರುವ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ತಾನು ವಿರುದ್ಧವಾಗಿಲ್ಲ, ಆದರೆ ಸರ್ವೋಚ್ಚ ನ್ಯಾಯಾಲಯದ ಸಮಿತಿಯಿಂದ ತನಿಖೆಯು ಹೆಚ್ಚು ಉಪಯುಕ್ತ ಮತ್ತು ಪರಿಣಾಮಕಾರಿಯಾಗುತ್ತದೆ ಎಂಬ ಪವಾರ ಅವರ ಇತ್ತೀಚಿನ ಹೇಳಿಕೆಯ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ.