ನ್ಯಾಯಾಲಯದಲ್ಲಿ ಹಿನ್ನಡೆ: ಶನಿವಾರ ಬಂಗಲೆ ತೊರೆಯಲಿರುವ ರಾಹುಲ್ ಗಾಂಧಿ
ಹೊಸದಿಲ್ಲಿ: ಲೋಕಸಭಾ ಸಂಸದ ಸ್ಥಾನದಿಂದ ಅನರ್ಹತೆಗೆ ಕಾರಣವಾದ "ಮೋದಿ ಉಪನಾಮ" ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ಹೇರುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮನವಿಯನ್ನು ಗುಜರಾತ್ ನ್ಯಾಯಾಲಯ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಹುಲ್ ಅವರು ಮಧ್ಯ ದಿಲ್ಲಿಯ ತುಘಲಕ್ ಲೇನ್ ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಶನಿವಾರ ಬೆಳಿಗ್ಗೆ ತೊರೆಯಲು ನಿರ್ಧರಿಸಿದ್ದಾರೆ ಎಂದು NDTV ವರದಿ ಮಾಡಿದೆ.
52 ವರ್ಷದ ರಾಹುಲ್ ಗಾಂಧಿ ಅವರಿಗೆ ಮನೆ ಖಾಲಿ ಮಾಡಲು ಲೋಕಸಭೆಯ ವಸತಿ ಸಮಿತಿಯು ರವಿವಾರ ಗಡುವು ನಿಗದಿಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನ ನ್ಯಾಯಾಲಯದಿಂದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಸಾಬೀತಾದ ನಂತರ ಎರಡು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. ಆ ನಂತರ ಮಾರ್ಚ್ 27 ರಂದು ಬಂಗಲೆಯನ್ನು ಖಾಲಿ ಮಾಡುವಂತೆ ರಾಹುಲ್ ಗಾಂಧಿ ನೋಟಿಸ್ ಸ್ವೀಕರಿಸಿದ್ದರು,
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎರಡು ವರ್ಷಗಳ ಶಿಕ್ಷೆಗೆ ಗುರಿಯಾದ ಅಪರಾಧಿ ಸಂಸದನಾಗಿ ಮುಂದುವರಿಯಲು ಸಾಧ್ಯವಿಲ್ಲ ಹಾಗೂ ಇನ್ನು ಮುಂದೆ ಅವರು ಇದ್ದ ಬಂಗಲೆಯಲ್ಲಿ ಉಳಿಯಲು ಸಾಧ್ಯವಿಲ್ಲದ ಕಾರಣ ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸಿದೆ. 2005 ರಿಂದ ರಾಹುಲ್ ಈ ಬಂಗಲೆಯಲ್ಲಿದ್ದಾರೆ.
ಗುಜರಾತ್ ನ್ಯಾಯಾಲಯವು ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿತ್ತು, ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.. ಇದರರ್ಥ ರಾಹುಲ್ ಗಾಂಧಿ ಅವರನ್ನು ಸದ್ಯಕ್ಕೆ ಸಂಸದರಾಗಿ ಮತ್ತೆ ಮುಂದುವರಿಯಲು ಸಾಧ್ಯವಿಲ್ಲ.
ಇತ್ತೀಚಿನ ನ್ಯಾಯಾಲಯದ ಹಿನ್ನಡೆಯ ನಂತರ ಬಂಗಲೆಯನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ
ಕಳೆದ ವಾರ, 12 ತುಘಲಕ್ ಲೇನ್‌ನ ಹೊರಗೆ ಎರಡು ಟ್ರಕ್‌ಗಳು ನಿಂತಿತ್ತು. ಅಲ್ಲಿ ಕಾರ್ಮಿಕರು ಓಡಾಡುತ್ತಿರುವುದು ಕಂಡುಬಂದಿದೆ.