×
Ad

ಟ್ವೆಂಟಿ-20 ಕ್ರಿಕೆಟ್: ವಿಕೆಟ್ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಮುರಿದ ಎಂ.ಎಸ್.ಧೋನಿ

Update: 2023-04-22 08:01 IST

ಹೊಸದಿಲ್ಲಿ: ಜಂಟಲ್‌ಮ್ಯಾನ್ಸ್ ಆಟವನ್ನು ಆಡಿದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಎಂ.ಎಸ್. ಧೋನಿ ಅವರು 41 ನೇ ವಯಸ್ಸಿನಲ್ಲಿಯೂ ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸಿದ್ದಾರೆ.

ಶುಕ್ರವಾರ ನಡೆದ ಐಪಿಎಲ್  ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಧೋನಿ ಟಿ-20 ಕ್ರಿಕೆಟ್ ನಲ್ಲಿ  ವಿಶ್ವ ದಾಖಲೆಯನ್ನು ಮುರಿದರು. ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್‌-ಕೀಪರ್‌ ಎನಿಸಿಕೊಂಡರು.

ಈ ಹಿಂದೆ ಕ್ವಿಂಟನ್ ಡಿ ಕಾಕ್ ಅವರು ಈ ದಾಖಲೆಯನ್ನು ಹೊಂದಿದ್ದರು. ಇದೀಗ  ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಮೀರಿಸಿದ್ದಾರೆ.

ಪಂದ್ಯ ಆರಂಭವಾಗುವ ಮೊದಲು ಧೋನಿ ಹಾಗೂ  ಡಿ ಕಾಕ್ ನಂಬರ್ 1 ಸ್ಥಾನದಲ್ಲಿದ್ದರು, ಇಬ್ಬರೂ ಟಿ-20 ಕ್ರಿಕೆಟ್‌ನಲ್ಲಿ ಒಟ್ಟು 207 ಕ್ಯಾಚ್‌ಗಳನ್ನು ಪಡೆದಿದ್ದರು. ಪಂದ್ಯದಲ್ಲಿ ಮಹೇಶ್ ತೀಕ್ಷಣ ಅವರ ಬೌಲಿಂಗ್‌ನಲ್ಲಿ ಏಡೆನ್ ಮಾರ್ಕ್ರಾಮ್ ಅವರ ಕ್ಯಾಚ್ ಅನ್ನು ಧೋನಿ ಪಡೆದ ನಂತರ, ಅವರು ಡಿ ಕಾಕ್  ಅವರ ದಾಖಲೆ ಹಿಂದಿ ನಂ.1  ಸ್ಥಾನಕ್ಕೇರಿದರು.

ಧೋನಿ ಟಾಪ್ 5 ರಲ್ಲಿರುವ ಏಕೈಕ ಭಾರತೀಯ ಅಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್-ಕೀಪರ್ ದಿನೇಶ್ ಕಾರ್ತಿಕ್ ಪಟ್ಟಿಯಲ್ಲಿ  ಧೋನಿ ನಂತರದ ಸ್ಥಾನದಲ್ಲಿದ್ದಾರೆ.

ಪುರುಷರ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್‌ಕೀಪರ್‌ಗಳು:

208 - ಎಂಎಸ್ ಧೋನಿ

207 - ಕ್ವಿಂಟನ್ ಡಿ ಕಾಕ್

205 - ದಿನೇಶ್ ಕಾರ್ತಿಕ್

172 - ಕಮ್ರಾನ್ ಅಕ್ಮಲ್

150 - ದಿನೇಶ್ ರಾಮ್ದಿನ್

Similar News