ಕರ್ನಾಟಕ ಚುನಾವಣೆ: ಎನ್‌ಸಿಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಅಜಿತ್ ಪವಾರ್ ಹೆಸರಿಲ್ಲ!
Update: 2023-04-22 10:17 IST
ಮುಂಬೈ: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶುಕ್ರವಾರ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಿರಿಯ ನಾಯಕ ಅಜಿತ್ ಪವಾರ್(Ajit Pawar) ಹೆಸರು ಇಲ್ಲ.
ಅಜಿತ್ ಪವಾರ್ ಅವರು ಪಕ್ಷದಿಂದ ಹೊರಬರುವ ಸಾಧ್ಯತೆಯ ಊಹಾಪೋಹಗಳನ್ನು ನಿರಾಕರಿಸಿದ್ದರೂ ಮುಂಬೈನಲ್ಲಿ ನಡೆದಿದ್ದ ಎನ್‌ಸಿಪಿಯ ಸಭೆಯಿಂದ ಹೊರಗುಳಿದಿದ್ದರು.
ಎನ್ ಸಿಪಿಯ 15 ಸದಸ್ಯರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್, ಶಿವಾಜಿರಾವ್ ಗಾರ್ಜೆ, ಕ್ಲೈಡ್ ಕ್ರಾಸ್ಟೊ ಮತ್ತು ಆರ್. ಹರಿ ಸೇರಿದ್ದಾರೆ.
ಪಕ್ಷದ ಕರ್ನಾಟಕ ಘಟಕದ ಮುಖ್ಯಸ್ಥರಾಗಿರುವ ಹರಿ ಅವರು ಯಲಬುರ್ಗಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಎನ್‌ಸಿಪಿ ಶುಕ್ರವಾರ ದಕ್ಷಿಣ ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.