×
Ad

ರೈಲಿನಲ್ಲಿ ಬೆಂಕಿ ಆಕಸ್ಮಿಕ: ಪ್ರಯಾಣಿಕರು ಪಾರು

Update: 2023-04-23 21:28 IST

ಹೊಸದಿಲ್ಲಿ, ಎ.23:  ಮಧ್ಯಪ್ರದೇಶದ ರತ್ಲಾಂನ ಪ್ರೀತಮ್ ನಗರ ರೈಲು ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ ರೈಲೊಂದರ  ಜನರೇಟರ್ ಬೋಗಿಯಲ್ಲಿ ಬೆಂಕಿ ಆಕಸ್ಮಿಕವುಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ತಿಳಿದುಬಂದಿದೆ.

ರತ್ಲಾಂ-ಡಾ. ಅಂಬೇಡ್ಕರ್ ನಗರ ಡೆಮು ರೈಲಿನಲ್ಲಿ ಈ ಅವಘಡ ಸಂಭವಿಸಿದೆ.‘‘ ರೈಲಿನಲ್ಲಿ ಸುಮಾರು 150-200 ಪ್ರಯಾಣಿಕರಿದ್ದು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಆನಂತರ ಅಗ್ನಿಯನ್ನು ನಂದಿಸಲಾಯಿತು’’ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ (ಡಿಆರ್ಎಂ) ರಜನೀಶ್ ಕುಮಾರ್ ತಿಳಿಸಿದ್ದಾರೆ. ‘‘ ಅಗ್ನಿ ಆಕಸ್ಮಿಕದ ಘಟನೆಗೆ ಕಾರಣವನ್ನು ಇನ್ನಷ್ಟೇ ದೃಢಪಡಿಸಬೇಕಾಗಿದೆ. ಯಾವುದೇ ಸಾವುನೋವಿನ ಘಟನೆಗಳು ವರದಿಯಾಗಿಲ್ಲ’’ ಎಂದು ಡಿಆರ್ಎಂ ತಿಳಿಸಿದ್ದಾರೆ. 
ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಎಂದವರು ಹೇಳಿದ್ದಾರೆ.

Similar News