×
Ad

ಮಾವೋವಾದಿಗಳಿಂದ ಐಇಡಿ ಸ್ಫೋಟ; 10 ಮಂದಿ ಪೊಲೀಸರು, ಚಾಲಕ ಮೃತ್ಯು

Update: 2023-04-26 16:24 IST

ರಾಯಪುರ್: ಛತ್ತೀಸಗಢದ ಬಸ್ತರ್ ಜಿಲ್ಲೆಯಲ್ಲಿ ಗುರುವಾರ ಮಾವೋವಾದಿಗಳು ಐಇಡಿ ಸ್ಫೋಟಿಸಿದ ಪರಿಣಾಮ ಮಿನಿ ವ್ಯಾನ್ ಒಂದರಲ್ಲಿ ಪ್ರಯಾಣಿಸುತ್ತಿದ್ದ 10 ಪೊಲೀಸ್ ಸಿಬ್ಬಂದಿ ಮತ್ತವರ ಚಾಲಕ ಮೃತಪಟ್ಟಿದ್ದಾರೆ. ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯಿಂದ ವಾಪಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಛತ್ತೀಸಗಢ ಪೊಲೀಸರ ವಿಶೇಷ ಪಡೆಯಾದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ಗೆ ಸೇರಿದ್ದ ಪೊಲೀಸರು ಈ ಮಿನಿ ವ್ಯಾನ್ನಲ್ಲಿದ್ದರು. ಮಾವೋವಾದಿಗಳ ವಿರುದ್ಧ ಸೆಣಸಾಡಲು ತರಬೇತಿ ಪಡೆದ ಆದಿವಾಸಿ ಸಮುದಾಯದವರನ್ನು ಡಿಸ್ಟ್ರಿಕ್ಟ್ ರಿಸರ್ವ ಗಾರ್ಡ್ಗೆ ನೇಮಿಸಲಾಗುತ್ತದೆ.

ಈ ದಾಳಿಯ ಬೆನ್ನಲ್ಲೇ ಛತ್ತೀಸಗಢ ಮುಖ್ಯಮಂತ್ರಿ ಭುಪೇಶ್ ಬಘೇಲ್ ಅವರಿಗೆ ದೂರವಾಣಿ ಕರೆ ಮೂಲಕ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ.

Similar News