ಪಡುಬಿದ್ರಿ: ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
Update: 2023-04-26 20:50 IST
ಪಡುಬಿದ್ರಿ, ಎ.26: ಪಡುಬಿದ್ರಿಯ ಸಾಸ್ ಬಿಲ್ಡಿಂಗ್‌ನಲ್ಲಿರುವ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿಗೆ ಎ.24ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸುರತ್ಕಲ್ ಕೃಷ್ಣಾಪುರದ ನಯನ ಸಾಗರ್ ಎಂಬವರ ಅಂಗಡಿಯ ಶೆಟರಿಗೆ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಸುಮಾರು 100 ಜೀನ್ಸ್ ಪ್ಯಾಂಟ್ ಗಳು, ಸುಮಾರು 250 ಶರ್ಟ್‌ಗಳು, 15 ಸ್ಕೂಲ್ ಬ್ಯಾಗ್‌ಗಳು, 20 ಪೀಸ್ ಸಾಫ್ ಜಾಕೇಟ್, 35 ಟೈರಾ ಲೆಗ್ಗಿಂಗ್ಸ್, 2,000 ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 2,83,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.