×
Ad

2024ರ ಲೋಕಸಭಾ ಚುನಾವಣೆ: ಎಐಎಡಿಎಂಕೆ-ಬಿಜೆಪಿ ನಡುವೆ ಮೈತ್ರಿ ಒಪ್ಪಂದ

Update: 2023-04-27 21:34 IST

ಚೆನ್ನೈ,ಎ.27: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ತಮ್ಮ ನಡುವಿನ ಮೈತ್ರಿಯನ್ನು ಮುಂದುವರಿಸಲು ಎಐಡಿಎಂಕೆ ಮತ್ತು ಬಿಜೆಪಿ ಒಪ್ಪಿಕೊಂಡಿವೆ.

ಬುಧವಾರ ರಾತ್ರಿ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ.ಕೆ.ಪಳನಿಸ್ವಾಮಿ ಅವರ ನಡುವೆ ನಡೆದ ಮಾತುಕತೆ ಸಂದರ್ಭದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ‌

2024ರ ಲೋಕಸಭಾ ಚುನಾವಣೆಗಾಗಿ ಕೇಂದ್ರ ನಾಯಕತ್ವವು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೆ ತಾನು ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದ್ದರೆನ್ನಲಾದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದರೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಎಐಎಡಿಎಂಕೆ ಮತ್ತು ಬಿಜೆಪಿ ನಡುವೆ ಮೂಡಿದ್ದ ಬಿರುಕಿಗೆ ತೇಪೆ ಹಾಕುವಲ್ಲಿ ಶಾ ಯಶಸ್ವಿಯಾಗಿದ್ದಾರೆ.

Similar News