×
Ad

ಭಗೀರಥ ಮರ್ಹಷಿ ದೃಢ ಸಂಕಲ್ಪದ ಪ್ರತೀಕ: ವೀಣಾ ಬಿ.ಎನ್

Update: 2023-04-27 22:14 IST

ಉಡುಪಿ, ಎ.27: ದಾರ್ಶನಿಕರ ಸಾಧನೆಯು ಅವರು ನಡೆದು ಬಂದ ಕಷ್ಟದ ಹಾದಿಯನ್ನು ತಿಳಿಸುತ್ತದೆ. ಭಗೀರಥ ಮರ್ಹಯ ತ್ಯಾಗ, ಪ್ರಯತ್ನ, ಛಲ, ದೃಢಸಂಕಲ್ಪದಿಂದ ಪವಿತ್ರ ಗಂಗೆಯು ಭೂಮಿಗೆ ಬರುವಂತಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದ್ದಾರೆ. 

ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ನರಸಿಂಹಮೂರ್ತಿ, ಭುವನಪ್ರಸಾದ್ ಹೆಗ್ಡೆ,  ಸಂಗೊಳ್ಳಿ ರಾಯಣ್ಣ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸವಯ್ಯ ಸ್ವಾಮಿ ಹಿರೇಮಠ, ಸಾಹಿತಿ ನಾರಾಯಣ ಮಡಿ ಹಾಗೂ ಇತರು ಉಪಸ್ಥಿತರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷರ ರಾಜ್ ಹೆಚ್.ಪಿ ವಂದಿಸಿದರು.

Similar News