×
Ad

ಮೀ ಟೂ ವಿವಾದ: ಸಾವಿಗೆ ಶರಣಾಗಲು ಬಯಸುತ್ತೇನೆ ಎಂದ ಬೃಜ್‌ಭೂಷಣ್!

Update: 2023-04-28 08:30 IST

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಗುರುವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ,"ನಾನು ಅಸಹಾಯಕ ಎಂಬ ಭಾವನೆ ಬಂದ ದಿನದಂದು ಸಾವಿಗೆ ಶರಣಾಗುತ್ತೇನೆ" ಎಂದು ಬಹಿರಂಗಪಡಿಸಿದ್ದಾರೆ.

"ಸ್ನೇಹಿತರೇ, ನಾನು ಏನು ಪಡೆದಿದ್ದೇನೆ ಹಾಗೂ ಏನು ಕಳೆದುಕೊಂಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ದಿನ ಮತ್ತು ಹೋರಾಟಕ್ಕೆ ನನ್ನಲ್ಲಿ ಶಕ್ತಿ ಇಲ್ಲ ಎಂದು ಭಾವಿಸಿದ ದಿನ, ನನಗೆ ಅಂಥ ಬಾಳ್ವೆ ನಡೆಸಬೇಕಾಗಿಲ್ಲ. ನಾನು ಸಾವಿಗೆ ಶರಣಾಗುತ್ತೇನೆ. ಅಂಥ ಜೀವನ ನಡೆಸುವ ಬದಲು ಮೃತ್ಯು ನನ್ನನ್ನು ಕರೆದೊಯ್ಯಲಿ ಎಂದು ಬಯಸುತ್ತೇನೆ" ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಭಾರತದ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಮತ್ತು ಬಜರಂಗ್ ಪೂನಿಯ ಮತ್ತು ಇತರ ಹಲವು ಮಂದಿ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಈ ಬಗ್ಗೆ ಹೇಳಿಕೆ ನೀಡಿದ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪಿ.ಟಿ.ಉಷಾ, ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಮುನ್ನ ಕುಸ್ತಿಪಟುಗಳು ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Similar News