×
Ad

ಹಿಂಸಾಚಾರದ ನಂತರ ಮಣಿಪುರದ ಜಿಲ್ಲೆಯಲ್ಲಿ ಗುಂಪುಗೂಡಲು ನಿಷೇಧ, ಇಂಟರ್ನೆಟ್ ಸ್ಥಗಿತ

Update: 2023-04-28 10:04 IST

ಇಂಫಾಲ್/ಗುವಾಹಟಿ: ಮುಖ್ಯಮಂತ್ರಿ ಎನ್.  ಬಿರೇನ್ ಸಿಂಗ್ ಅವರ ಭೇಟಿಗೆ ಮುನ್ನ ಚುರಾಚಂದ್‌ಪುರ ಜಿಲ್ಲೆಯಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಮಣಿಪುರ ಸರಕಾರವು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡಲು  ನಿಷೇಧಿಸಿದೆ ಹಾಗೂ  ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

 ಗುರುವಾರ, ಬಿಜೆಪಿ ಸರಕಾರದ ಮೀಸಲು ಮತ್ತು ಸಂರಕ್ಷಿತ ಅರಣ್ಯಗಳು ಮತ್ತು ಜೌಗು ಪ್ರದೇಶಗಳಂತಹ ಪ್ರದೇಶಗಳ ಸಮೀಕ್ಷೆಯ ಕುರಿತು  ಮುಖ್ಯಮಂತ್ರಿ ಸಿಂಗ್ ಅವರ ನಿಗದಿತ ಕಾರ್ಯಕ್ರಮದ ಸ್ಥಳವನ್ನು ಗುಂಪೊಂದು ಧ್ವಂಸಗೊಳಿಸಿ, ಬೆಂಕಿ ಹಚ್ಚಿತು.

ಜಿಲ್ಲೆಯಲ್ಲಿ ಶಾಂತಿ ಭಂಗ, ಸಾರ್ವಜನಿಕ ನೆಮ್ಮದಿಗೆ ಭಂಗ ಹಾಗೂ ಮಾನವ ಜೀವ ಮತ್ತು ಆಸ್ತಿಪಾಸ್ತಿಗಳಿಗೆ ಗಂಭೀರ ಅಪಾಯ ಉಂಟಾಗಬಹುದು ಎಂಬ ಪೊಲೀಸ್ ವರದಿಯನ್ನು ಉಲ್ಲೇಖಿಸಿ ದೊಡ್ಡ ಸಭೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಚುರಾಚಂದ್‌ಪುರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್ ಥಿಯೆನ್ಲಟ್‌ಜಾಯ್ ಗಂಗ್ಟೆ ತಿಳಿಸಿದ್ದಾರೆ. ಗುರುವಾರ ಆದೇಶ ಹೊರಡಿಸಿದೆ.

ಬಿರೇನ್ ಅವರು ಇಂದು ಜಿಲ್ಲೆಯಲ್ಲಿ ಜಿಮ್ ಮತ್ತು ಕ್ರೀಡಾ ಸೌಲಭ್ಯವನ್ನು ಉದ್ಘಾಟಿಸುವ ಕಾರ್ಯಕ್ರಮವಿತ್ತು.

Similar News