×
Ad

ANI ಸುದ್ದಿಸಂಸ್ಥೆಯ ಖಾತೆಯನ್ನು ಲಾಕ್‌ ಮಾಡಿದ ಟ್ವಿಟರ್‌ !

Update: 2023-04-29 17:21 IST

ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಎಎನ್‌ಐ ಸುದ್ದಿ ಸಂಸ್ಥೆಯ ಟ್ವಿಟರ್‌ ಖಾತೆ ಹೊಂದಿರುವವರು 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬ ಕಾರಣ ನೀಡಿ ಖಾತೆಯನ್ನು ಟ್ವಿಟರ್‌ ಲಾಕ್‌ ಮಾಡಿದೆ.

“ನಿಮ್ಮ ಖಾತೆ @ಎಎನ್‌ಐ ಅನ್ನು ಲಾಕ್‌ ಮಾಡಲಾಗಿದೆ” ಎಂಬ ಸಂದೇಶ ಎಎನ್‌ಐ ಟ್ವಿಟರ್‌ ಹ್ಯಾಂಡಲ್‌ ಇಂದು ತೋರಿಸಿದೆ.

“ಟ್ವಿಟರ್‌ ಖಾತೆ ರಚಿಸಲು ನೀವು ಕನಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು. ಈ ವಯಸ್ಸಿನ ಅಗತ್ಯತೆಗಳನ್ನು ನೀವು ಪೂರೈಸುವುದಿಲ್ಲ, ಈ ಕಾರಣಕ್ಕಾಗಿ ನಿಮ್ಮ ಖಾತೆಯನ್ನು ಲಾಕ್‌ ಮಾಡಲಾಗಿದೆ ಮತ್ತು ಟ್ವಿಟರ್‌ನಿಂದ ತೆಗೆದುಹಾಕಲಾಗುವುದು,” ಎಂದು ಟ್ವಿಟರ್‌ ನೀಡಿದ ನೋಟಿಸ್‌ ತಿಳಿಸಿದೆ.

“ಈ ಖಾತೆ ಅಸ್ತಿತ್ವದಲ್ಲಿಲ್ಲ” ಎಂಬ ಸಂದೇಶ ನಂತರ ಎಎನ್‌ಐ ಟ್ವಿಟರ್‌ ಪುಟದಲ್ಲಿ ಕಂಡುಬಂತು.

ಈ ವಿದ್ಯಮಾನ ಕುರಿತು ಬಳಕೆದಾರರಿಗೆ ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್‌ ಮಾಹಿತಿ ನೀಡಿದ್ದಾರಲ್ಲದೆ ಸಂಸ್ಥೆಯ ಟ್ವಿಟರ್‌ ಹ್ಯಾಂಡಲ್‌ ಅನ್ನು ಪುನಃಸ್ಥಾಪಿಸುವಂತೆ ಕೋರಿದ್ದಾರೆ.

“ಎಎನ್‌ಐ ಅನ್ನು ಫಾಲೋ ಮಾಡುವವರಿಗೆ ಕೆಟ್ಟ ಸುದ್ದಿ. 7.6 ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ಭಾರತದ ಅತ್ಯಂತ ದೊಡ್ಡ ಸುದ್ದಿ ಏಜನ್ಸಿಯ ಖಾತೆಯನ್ನು ಟ್ವಿಟರ್‌ ಲಾಕ್‌ ಮಾಡಿದೆ ಹಾಗೂ ಈ ಮೇಲ್‌ ಕಳುಹಿಸಿದೆ-13 ವರ್ಷಕ್ಕಿಂತ ಕಡಿಮೆ ವಯಸ್ಸು! ನಮ್ಮ ಗೋಲ್ಡ್‌ ಟಿಕ್‌ ಅನ್ನು ತೆಗೆದು ಹಾಕಲಾಯಿತು, ನಂತರ ಬ್ಲೂ ಟಿಕ್‌ ನೀಡಲಾಯಿತು, ಈಗ ಲಾಕ್‌ ಮಾಡಲಾಗಿದೆ,” ಎದು ಸ್ಮಿತಾ ಪ್ರಕಾಶ್‌ ಟ್ವೀಟ್‌ ಮಾಡಿದ್ದಾರೆ.

“ಟ್ವಿಟರ್‌ ಗಮನಕ್ಕೆ, ಎಎನ್‌ಐ ಹ್ಯಾಂಡಲ್‌ ಅನ್ನು ದಯವಿಟ್ಟು ಪುನಃಸ್ಥಾಪಿಸುವಿರಾ. ನಾವು 13 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಲ್ಲ,” ಎಂದು ಇನ್ನೊಂದು ಟ್ವೀಟ್‌ನಲ್ಲಿ ಅವರು ಅಪೀಲು ಮಾಡಿದ್ದಾರೆ.

Similar News