ಪಾಕಿಸ್ತಾನದಲ್ಲಿ ಅತ್ಯಾಚಾರ ಭೀತಿಯಿಂದ ಸಮಾಧಿಗಳಿಗೆ ಬೀಗ ಹಾಕಲಾಗಿದೆ ಎಂದು ಸುಳ್ಳು ವರದಿ ಮಾಡಿದ ಮಾಧ್ಯಮಗಳು: ನಿಜವೇನು?

Update: 2023-04-30 18:50 GMT

ಹೈದರಾಬಾದ್: ಸಮಾಧಿಗಳಿಗೆ ಬೀಗ ಜಡಿದಿರುವ ಚಿತ್ರವೊಂದು ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಶವವನ್ನು ಅತ್ಯಾಷಾರ ಮಾಡುವ ಭೀತಿಯಿಂದಾಗಿ, ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗಳಿಗೆ ಬೀಗ ಜಡಿಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಹಲವು ಸುದ್ದಿ ವಾಹಿನಿಗಳು ವರದಿ ಮಾಡಿವೆ. 

 ANI, Ndtv, times now ಸೇರಿದಂತೆ ಹಲವು ರಾಷ್ಟ್ರೀಯ ಮಾಧ್ಯಮಗಳು, ಹಾಗೂ ಪ್ರಾದೇಶಿಕ ಮಾಧ್ಯಮಗಳು ಇದೇ ಪ್ರತಿಪಾದನೆಯೊಂದಿಗೆ ವರದಿ ಮಾಡಿವೆ.  ANI ಟ್ವಿಟರ್ ಖಾತೆದಾರರೊಬ್ಬರು ಹಾಕಿರುವ ಟ್ವೀಟ್ ಆಧಾರದಲ್ಲಿ ವರದಿ ಮಾಡಿದ್ದರೆ, Times of India ಸೇರಿದಂತೆ ಬಹುತೇಕ ಉಳಿದ ಮಾಧ್ಯಮಗಳು ANI ವರದಿಯನ್ನು ಆಧರಿಸಿ ವರದಿ ಮಾಡಿವೆ. 
 


TV9 Kannada, Mirror Now, ThePrint, India Today, Wion, IndiaTV, Times Now, DNA India, OpIndia Hindi, News24, ABP News, Amar Ujala, News18, Firstpost ಮತ್ತು Jagran ಸೇರಿದಂತೆ ಇತರೆ ಮಾಧ್ಯಮಗಳು ತಮ್ಮ ತಮ್ಮ ವರದಿಗಳಲ್ಲಿ ಇದೇ ಚಿತ್ರವನ್ನು ಬಳಸಿಕೊಂಡಿವೆ.  

Photo: Twitter/Zoo_bear

ಈ ಟ್ವೀಟ್ ಅನ್ನು ಇಸ್ಲಾಂ ಧರ್ಮ 'ವಿಮರ್ಷಕ', ಲೇಖಕ ಹಾರಿಸ್ ಸುಲ್ತಾನ್ ಮಾಡಿದ್ದು, ಪಾಕಿಸ್ತಾನದ ಸಮಾಜವು ಶವ ಸಂಭೋಗಿಸುವಂತಹ ಹತಾಶ ಲೈಂಗಿಕತೆಯನ್ನು ಸೃಷ್ಟಿಸಿದೆ ಎಂದು ಬರೆದಿದ್ದರು. ಬಹುತೇಕ ಮಾಧ್ಯಮಗಳು ಈ ಟ್ವೀಟ್ ಅನ್ನು ತಮ್ಮ ವರದಿಗಳಲ್ಲಿ ಬಳಸಿತ್ತು. 

ಫ್ಯಾಕ್ಟ್ ಚೆಕ್

ಈ ಸುದ್ದಿಯ ಸತ್ಯಾಸತ್ಯತೆಯನ್ನು Altnews.in ಮಾಡಿದ್ದು, ಮಾಧ್ಯಮಗಳು ಬಳಸಿದ ಈ ಸಮಾಧಿಯ ಚಿತ್ರ ಪಾಕಿಸ್ತಾನದ್ದು ಅಲ್ಲ ಎಂದು ತಿಳಿದು ಬಂದಿದೆ.  ವಾಸ್ತವವಾಗಿ, ಈ ಚಿತ್ರ ಭಾರತದ್ದಾಗಿದ್ದು, ಹೈದರಾಬಾದ್ ನ ಮುಸ್ಲಿಂ ದಫನಭೂಮಿಯ ಸಮಾಧಿಯಾಗಿದೆ.

ಈ ದಫನ ಭೂಮಿಯು ಹೈದರಾಬಾದ್‌ನ ಮಾದನ್ನಪೇಟೆಯ ದರಾಬ್ ಜಂಗ್ ಕಾಲೋನಿಯಲ್ಲಿರುವ ಮಸೀದಿ ಇ ಸಲಾರ್ ಮುಲ್ಕ್ ಎದುರಿನಲ್ಲಿ ಇದೆ ಎನ್ನುವುದನ್ನು ಆಲ್ಟ್ ನ್ಯೂಸ್ ಕಂಡುಕೊಂಡಿದೆ. 
  
ಆಲ್ಟ್ ನ್ಯೂಸ್ ಹೈದರಾಬಾದ್ ನಿವಾಸಿಯಾಗಿರುವ ಅಬ್ದುಲ್ ಜಲೀಲ್ ಎಂಬ ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕಿಸಿ, ಈ ದಫನಭೂಮಿಯ ಬಗ್ಗೆ ಖಚಿತಪಡಿಸಿದ್ದು,   ಜಲೀಲ್ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಯ ಇನ್ನಷ್ಟು ಫೋಟೋಗಳನ್ನು ಆಲ್ಟ್ ನ್ಯೂಸ್ ಗಾಗಿ ಸಂಗ್ರಹಿಸಿದ್ದಾರೆ. 

ಈ ಚಿತ್ರಗಳು ಹಾಗೂ ವೈರಲ್ ಫೋಟೋ ಒಂದೇ ಆಗಿದ್ದು, ಹೈದರಾಬಾದ್ ನಲ್ಲಿರುವ ಸಮಾಧಿ ಫೋಟೋವನ್ನೇ ಪಾಕಿಸ್ತಾನದ ಸಮಾಧಿ ಎಂದು ತಪ್ಪಾಗಿ ಬಳಸಲಾಗಿದೆ ಎನ್ನುವುದನ್ನು ಆಲ್ಟ್ ನ್ಯೂಸ್ ಕಂಡುಕೊಂಡಿದೆ. 

ಸಮಾಧಿಗೆ ಬೀಗ ಜಡಿದಿರುವ ಬಗ್ಗೆ ಜಲೀಲ್ ಅವರು ಮಸ್ಜಿದ್ ಇ ಸಲಾರ್ ಮುಲ್ಕ್ ನ ನುಅಝಿನ್ ಮುಕ್ತಾರ್ ಸಾಹಬ್ ಜೊತೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ. 

ಈ ಸಮಾಧಿಯು ಸುಮಾರು 1.5 ರಿಂದ 2 ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು  ಬೀಗ ಸಂಬಂಧಪಟ್ಟ ಸಮಿತಿಯ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಎಂದು ಮುಕ್ತಾರ್ ಸಾಹಬ್ ಹೇಳಿದ್ದಾರೆ.  ಇದು ದಫನಭೂಮಿಯ ಪ್ರವೇಶದ್ವಾರದ ಬಳಿಯೇ ಇದ್ದು, ಬಹಳಷ್ಟು ಜನರು ಇಲ್ಲಿಗೆ ಬಂದು ಅನುಮತಿಯಿಲ್ಲದೆ ಹಳೆಯ ಸಮಾಧಿಗಳಲ್ಲೇ ಬೇರೆ  ಶವಗಳನ್ನು ಹೂಳುತ್ತಾರೆ.  ಇತರರು ಯಾವುದೇ ದೇಹವನ್ನು ಮತ್ತಷ್ಟು ಹೂಳುವುದನ್ನು ತಡೆಯುವ ಸಲುವಾಗಿ, ಮೃತರ ಕುಟುಂಬ ಅಲ್ಲಿ ಗ್ರಿಲ್ ಅಳವಡಿಸಿ ಬೀಗ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೃಪೆ: Altnews.in

Full View Full View

Similar News