'ದಿ ಕೇರಳ ಸ್ಟೋರಿ' ಸಿನಿಮಾಗೆ ತಡೆಯಾಜ್ಞೆ ನೀಡಬೇಕೆಂಬ ಅರ್ಜಿ ವಿಚಾರಣೆಗೆ ಸುಪ್ರೀಂ ನಿರಾಕರಣೆ

Update: 2023-05-02 10:41 GMT

ಹೊಸದಿಲ್ಲಿ: 'ದಿ ಕಾಶ್ಮೀರಿ ಫೈಲ್ಸ್‌' ಸಿನಿಮಾದಲ್ಲಿ ದ್ವೇಷ ಹುಟ್ಟಿಸುವ ಹಲವಾರು ವಿಚಾರಗಳನ್ನು ಉಲ್ಲೇಖಿಸಿದ್ದರಿಂದ ಅದು ವಿವಾದಕ್ಕೊಳಗಾಗಿತ್ತು. ಇದೀಗ 'ದಿ ಕೇರಳ ಸ್ಟೋರಿ' ಎಂಬ ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಗ್ರಾಸವಾಗಿದೆ. ಈ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಕೈಗೆತ್ತಿಕೊಳ್ಳಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ. 

ಈ ಸಿನಿಮಾವು ದ್ವೇಷಭಾಷಣದ ರೂಪವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಸಿನಿಮಾವನ್ನು ಸುದಿಪ್ತೊ ಸೇನ್‌ ನಿರ್ದೇಶಿಸಿದ್ದು ವಿಪುಲ್‌ ಅಮೃತ್‌ ಲಾಲ್‌ ಶಾ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ 32,000 ಮಂದಿ ಮಹಿಳೆಯರನ್ನು ಐಸಿಸ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂಬ ಪ್ರತಿಪಾದನೆಯನ್ನು ವಿರೋಧಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಹಲವಾರು ಮಂದಿ ಹೇಳಿಕೆಗಳನ್ನು ನೀಡಿದ್ದರು. 

ಈ ಸಿನಿಮಾವು ಮೇ 5ರಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. 

Similar News