×
Ad

ರಾಹುಲ್‌ ಗಾಂಧಿಗೆ ಮತ್ತೆ ಹಿನ್ನಡೆ: ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಗುಜರಾತ್‌ ಹೈಕೋರ್ಟ್‌ ನಿರಾಕರಣೆ

Update: 2023-05-02 17:12 IST

ಹೊಸದಿಲ್ಲಿ: ಮೋದಿ ಉಪನಾಮ ಹೇಳಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೊಂದು ಹಿನ್ನಡೆಯಾಗಿದೆ. 

ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯ ರಾಹುಲ್‌ ಗಾಂಧಿಗೆ ವಿಧಿಸಿರುವ ಎರಡು ವರ್ಷಗಳ ಜೈಲು ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.  

ಜೂನ್ 4 ರ ನಂತರ ರಾಹುಲ್‌ ಅವರ ಅರ್ಜಿಯ ಮೇಲೆ ಆದೇಶವನ್ನು ಹೈಕೋರ್ಟ್‌ ನೀಡಲಿದೆ. ತಮ್ಮ ಅರ್ಜಿಯ ಮೇಲೆ ಹೈಕೋರ್ಟ್ ಆದೇಶವನ್ನು ಪ್ರಕಟಿಸುವವರೆಗೆ ಶಿಕ್ಷೆಗೆ ಮಧ್ಯಂತರ ತಡೆ ಕೋರಿದ್ದರು.

ಸೂರತ್ ನ್ಯಾಯಾಲಯದ ತೀರ್ಪಿನ ನಂತರ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.

Similar News