×
Ad

ಜಮ್ಮು ಕಾಶ್ಮೀರ: ಸೇನಾ ಹೆಲಿಕಾಪ್ಟರ್‌ ಪತನ

Update: 2023-05-04 12:01 IST

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಪ್ರದೇಶದ ಬಳಿ ಗುರುವಾರ ಬೆಳಗ್ಗೆ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಮಚ್ನಾ ಗ್ರಾಮದಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರು ಸೇನಾ ಸಿಬ್ಬಂದಿಗಳು ವಿಮಾನದಲ್ಲಿದ್ದರು ಎಂದು ಹೇಳಲಾಗಿದೆ.

ಮೂರು ಮಂದಿ ಪ್ರಯಾಣಿಸುತ್ತಿದ್ದ  ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವ್ ಇಂದು ಪತನಗೊಂಡಿದ್ದು  ಕಳೆದ ಎರಡು ತಿಂಗಳಲ್ಲಿ ಮೂರನೇ  ಬಾರಿ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವ್ ಅಪಘಾತಕ್ಕೆ ಒಳಗಾಗಿದೆ.

ಹೆಲಿಕಾಪ್ಟರ್ ಹುಡುಕಾಟ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

 “ಹೆಲಿಕಾಪ್ಟರ್‌ನಲ್ಲಿ ಎರಡರಿಂದ ಮೂರು ಜನರಿದ್ದರು. ಅವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ದಟ್ಟವಾದ ಅರಣ್ಯವನ್ನು ಹೊಂದಿರುವ ಪ್ರದೇಶದಲ್ಲಿ ಯಾವುದೇ ದೂರಸಂಪರ್ಕ ಜಾಲವಿಲ್ಲದ ಕಾರಣ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Similar News