×
Ad

ನಿನ್ನನ್ನು ಈ ಕ್ಷಣದಲ್ಲೇ 'ಉಗ್ರಗಾಮಿ'ಎಂದು ಘೋಷಿಸಬಲ್ಲೆ:ಶಿಕ್ಷಕನಿಗೆ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿ ವಿಡಿಯೊ ವೈರಲ್

Update: 2023-05-04 19:41 IST

ಪಾಟ್ನಾ: "ನಿನ್ನನ್ನು ಕ್ಷಣದಲ್ಲೇ ಉಗ್ರಗಾಮಿ ಎಂದು ಘೋಷಿಸಬಲ್ಲೆ" ಎಂದು ಬಿಹಾರದ ಪೊಲೀಸ್ ಅಧಿಕಾರಿಯೊಬ್ಬರು ಶಿಕ್ಷಕನಿಗೆ ಬೆದರಿಸುತ್ತಿರುವ ವಿಡಿಯೊ ವೈರಲ್ ಆಗಿದೆ. 

ರಾಜ್ಯ ರಾಜಧಾನಿ ಪಾಟ್ನಾದಿಂದ 165 ಕಿಮೀ ದೂರವಿರುವ ಜಮುಯ್ ಪೊಲೀಸ್ ಠಾಣೆಗೆ ವ್ಯಾಜ್ಯವೊಂದನ್ನು ಪರಿಹರಿಸಿಕೊಳ್ಳಲು ಶಿಕ್ಷಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿದ್ದರು.

ಈ ಘಟನೆಯು ಎರಡು ಮೂರು ದಿನಗಳ ಹಿಂದೆ ನಡೆದಿದೆ ಎಂದು ವರದಿಯಾಗಿದೆ.

ಮೂರು ದಿನ ತಡವಾಗಿ ಠಾಣೆಗೆ ಆಗಮಿಸಿದ್ದರಿಂದ ಪೊಲೀಸ್ ಅಧಿಕಾರಿಯು ಶಿಕ್ಷಕನ ವಿರುದ್ಧ ಆಕ್ರೋಶಗೊಂಡಿದ್ದಾರೆ ಮತ್ತು ಶಿಕ್ಷಕನ ಹೆಸರಿಡಿದು ಕರೆದಿದ್ದಾರೆ ಎಂದು ವರದಿಯಾಗಿದೆ. 

ಶಿಕ್ಷಕನು ತನ್ನ ಅಂಶಗಳನ್ನು ಪ್ರತಿಪಾದಿಸಲು ಯತ್ನಿಸಿದ್ದಾನಾದರೂ, ಅಷ್ಟು ಹೊತ್ತಿಗೆ ಪೊಲೀಸ್ ಅಧಿಕಾರಿಯು ತಾಳ್ಮೆ ಕಳೆದುಕೊಂಡಿದ್ದಾಗಿ ವರದಿಯಾಗಿದೆ.

"ಜನರನ್ನು ಉಗ್ರಗಾಮಿಗಳು ಎಂದು ಘೋಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಿನ್ನನ್ನು ಕ್ಷಣಾರ್ಧದಲ್ಲಿ ಉಗ್ರಗಾಮಿ ಎಂದು ಘೋಷಿಸಬಹುದು" ಎಂದು ಪೊಲೀಸ್ ಅಧಿಕಾರಿ ರಾಜೇಶ್ ಶರಣ್ ಬೆದರಿಕೆ ಒಡ್ಡಿದ್ದಾರೆ.

ಘಟನೆಯ ಸಂಬಂಧ ಜಮುಯ್ ಪೊಲೀಸ್ ಠಾಣೆಯು ತನಿಖೆಗೆ ಆದೇಶಿಸಿದೆ.

Similar News