ನೀರಿನ ಸಮಸ್ಯೆಯ ಬಗ್ಗೆ ಗಮನ ನೀಡಿ

Update: 2023-05-04 18:40 GMT

ಮಾನ್ಯರೇ,

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಎಷ್ಟೇ ಯೋಜನೆಗಳು ಅನುಷ್ಠಾನಗೊಂಡರೂ ಇನ್ನೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿಲ್ಲ. ಇರುವ ಅನೇಕ ಬೋರ್‌ವೆಲ್‌ಗಳು ಕೆಟ್ಟು ನಿಂತಿದೆ. ಬೋರ್‌ವೆಲ್‌ಗಳ ಮೂಲಕ ಮನೆ ಮನೆಗೆ ನೀರು ಹರಿಸುವ ಉಪಕರಣಗಳು ಹಾಳಾಗಿವೆ. ಬಾವಿಗಳಲ್ಲಿ ನೀರು ಇಲ್ಲ, ಕೆರೆಗಳ ಹೂಳು ಎತ್ತಿಲ್ಲ, ಕಾಲುವೆಗಳ ಆಧುನೀಕರಣವಾಗಿಲ್ಲ, ಕಾಲಕಾಲಕ್ಕೆ ನೀರಿನ ಟ್ಯಾಂಕರ್‌ಗಳ ಶುಚಿತ್ವವನ್ನು ಕಾಪಾಡಿಲ್ಲ. ಹೀಗಾಗಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.

ಸರಕಾರ ಕಳೆದ ಎರಡು ತಿಂಗಳುಗಳಿಂದ ಸಂಪೂರ್ಣವಾಗಿ ಚುನಾವಣೆಯ ಕಾರ್ಯದಲ್ಲಿಯೇ ತೊಡಗಿಸಿಕೊಂಡು ಎಲ್ಲವನ್ನು ಮರೆತು ಬಿಟ್ಟಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಚುನಾವಣೆ ಮುಗಿಯುತ್ತಿದ್ದಂತೆಯೇ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಿ ನೀರಿನ ಸರಬರಾಜಿಗಾಗಿ ಟ್ಯಾಂಕರ್‌ಗಳನ್ನು ಬಳಸುವುದು, ಬೋರ್‌ವೆಲ್‌ಗಳನ್ನು ರಿಪೇರಿ ಮಾಡಿಸುವುದು, ಮಿನಿ ವಾಟರ್ ಸ್ಕೀಂನ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವುದು ತುರ್ತಾಗಿ ಮಾಡಬೇಕಾದ ಕಾರ್ಯವಾಗಿರುತ್ತದೆ. ಹಾಗೆಯೇ ಅಕಾಲಿಕ ಮಳೆಗಳಿಂದಾಗಿ ಅನಾಹುತಗಳಾದ ಮೇಲೆ ಪರಿಹಾರ ಕೊಡುವ ಬದಲಿಗೆ ಮೊದಲೇ ಸಕಾಲಿಕ ಯೋಜನೆಗಳನ್ನು ರೂಪಿಸಿ ಅವಘಡಗಳನ್ನು ತಪ್ಪಿಸಿ ಪ್ರಾಣಹಾನಿಯನ್ನು ತಡೆಗಟ್ಟಬೇಕಾಗಿದೆ.
 

Similar News