×
Ad

ಉಡುಪಿ: 39 ಬಡಮಕ್ಕಳಿಗೆ ಉಚಿತ ಸುನ್ನತ್ ಕಾರ್ಯಕ್ರಮ

Update: 2023-05-11 17:34 IST

ಉಡುಪಿ ಮೇ 11: ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಸಮಾಜದ ಒಟ್ಟು 39 ಬಡ ಮಕ್ಕಳಿಗೆ 40ನೇ ವರ್ಷದ ಉಚಿತ ಸುನ್ನತ್ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.  

ಮೊದಲನೇ ಹಂತವಾಗಿ ಉಡುಪಿಯ ಜಾಮಿಯಾ ಮಸೀದಿಯ ಸಭಾಂಗಣ ದಲ್ಲಿ 16 ಮಕ್ಕಳ ಮತ್ತು ಎರಡನೆಯ ಹಂತವಾಗಿ ಹಳೆಯಂಗಡಿಯ ಬೊಳ್ಳುರಿನ ಸಮಾಜ ಭವನದಲ್ಲಿ 23 ಮಕ್ಕಳ ಸುನ್ನತ್ತನ್ನು ಬೆಳಪುವಿನ ರಜ್ಜಬ್ ಉಸ್ತಾದ್ ನೆರವೇರಿಸಿದರು.

ಈ ಕಾರ್ಯಕ್ರಮ ವಿ.ಎಸ್.ಉಮ್ಮರ್ ಸುಪರ್ದಿಯಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್, ಕಾರ್ಯದರ್ಶಿ ಯು.ಇಬ್ರಾಹಿಂ, ಸಮಿತಿ ಸದಸ್ಯರಾದ ಫೇಮಸ್ ರಿಯಾಜ್ ಅಹ್ಮದ್, ಪರ್ವೇಜ್ ಅಹ್ಮದ್, ಖಾಲಿದ್ ಅಬ್ದುಲ್ ಅಝೀಜ್ ಸಹಕರಿಸಿದರು.

Similar News