×
Ad

​ಮೋದಿ ಸರಕಾರಕ್ಕೆ 9 ವರ್ಷ: ಮೇ 30ರಿಂದ ಬಿಜೆಪಿಯ ‘ವಿಶೇಷ ಸಂಪರ್ಕ ಅಭಿಯಾನ’

Update: 2023-05-16 22:09 IST

ಹೊಸದಿಲ್ಲಿ, ಮೇ 16: ನರೇಂದ್ರ ಮೋದಿ ಸರಕಾರಕ್ಕೆ 9 ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಬಿಜೆಪಿಯು ದೇಶಾದ್ಯಂತ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಒಂದು ತಿಂಗಳ ಅವಧಿಯ ವಿಶೇಷ ಸಂಪರ್ಕ ಅಭಿಯಾನವನ್ನು ಆಯೋಜಿಸಿದೆ.

ಮೇ 30ರಂದು ಹೊಸದಿಲ್ಲಿಯಲ್ಲಿ ನಡೆಯುವ ಬೃಹತ್ ರ್ಯಾಲಿಯೊಂದಿಗೆ ಪ್ರಧಾನಿ ಮೋದಿಯವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾಎ. ಮರುದಿನವೇ ಪ್ರಧಾನಿ ನೇತೃತ್ವದಲ್ಲಿ ಎರಡನೆ ರ್ಯಾಲಿ ನಡೆಯಲಿದೆ. ದೇಶಾದ್ಯಂತ 51 ರ್ಯಾಲಿಗಳನ್ನು ಆಯೋಜಿಸಲಾಗಿದ್ದು, ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.  

ನರೇಂದ್ರ ಮೋದಿಯವರು 2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Similar News