×
Ad

ಆರು ರಾಜ್ಯಗಳಾದ್ಯಂತ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

Update: 2023-05-17 11:49 IST

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ  ಮಧ್ಯಪ್ರದೇಶದ ಆರು ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

ಗ್ಯಾಂಗ್ ಸ್ಟರ್ ಗಳು, ಮಾದಕ ವಸ್ತು ಸಾಗಣೆಯಲ್ಲಿ ತೊಡಗಿರುವವರು, ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ಮೇಲೆ ದಾಳಿ ಮಾಡಲಾಗಿದೆ ಎಂದು ಎನ್ ಐಎ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಭಯೋತ್ಪಾದನಾ ನಿಗ್ರಹ ಸಂಸ್ಥೆ ಬುಧವಾರ ಮುಂಜಾನೆಯಿಂದ ಶಂಕಿತರಿಗೆ ಸಂಬಂಧಿಸಿದ ಕಚೇರಿ, ನಿವಾಸಗಳು ಸಹಿತ ಇತರ ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಿ ಸಿಕ್ಕ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿತು. ದಾಳಿಗಳು ಇನ್ನೂ ಮುಂದುವರಿದಿದೆ. ಕೆಲವರ ಬಳಿ ಇದ್ದ ಸುಧಾರಿತ ಸ್ಫೋಟಕಗಳು, ಗನ್ ಗಳು ಸೇರಿದಂತೆ ಆರ್ ಡಿಎಕ್ಸ್ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ವರ್ಷ NIA ದಾಖಲಿಸಿದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿಗಳನ್ನು ನಡೆಸಲಾಗುತ್ತಿದೆ

Similar News