ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಪ್ರಧಾನಿ ಮೋದಿ

Update: 2023-05-19 06:14 GMT

ಹೊಸದಿಲ್ಲಿ: ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಅಹಿಂಸೆಯಿಂದ ಮಾತ್ರ ಜಗತ್ತನ್ನು ಉಳಿಸಲು ಸಾಧ್ಯ ಎನ್ನುವುದು ನಾಯಕರ ನಂಬಿಕೆಯಾಗಿದ್ದು,  ಗಾಂಧಿ ಪ್ರತಿಮೆ ಶಾಂತಿಯ ಸಂದೇಶವಾಗಲಿದೆ.

"ಇಂದು ಜಪಾನ್‌ಗೆ ತೆರಳುವ ಮೊದಲು ಮಾತನಾಡಿದ ಪ್ರಧಾನಿ ಮೋದಿ ಅವರು “ಜಿ7 ಶೃಂಗಸಭೆಯನ್ನು ಎದುರು ನೋಡುತ್ತಿದ್ದೇನೆ ಹಾಗೂ  ಜಗತ್ತು ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳನ್ನು ಒಟ್ಟಾಗಿ ಪರಿಹರಿಸುವ ಅಗತ್ಯತೆಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವೆ’’ ಎಂದು ಹೇಳಿದರು.

"ಹಿರೋಷಿಮಾ ಜಿ- 7 ಶೃಂಗಸಭೆಯಲ್ಲಿ ಭಾಗವಹಿಸುವ ಕೆಲವು ನಾಯಕರೊಂದಿಗೆ ನಾನು ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತಿದ್ದೇನೆ. ಜಪಾನಿನ ಪ್ರಧಾನಿ  ಫುಮಿಯೊ ಕಿಶಿಡಾ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ" ಎಂದು ಮೋದಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ,

ಆಗಸ್ಟ್ 6, 1945 ರಂದು ಹಿರೋಷಿಮಾ ವಿಶ್ವದ ಮೊದಲ ಪರಮಾಣು ದಾಳಿಯನ್ನು ಅನುಭವಿಸಿತು.  ಈ ದಾಳಿಯು ಸುಮಾರು 140,000 ಜನರನ್ನು ಕೊಂದಿತು ಮತ್ತು ಊಹಿಸಲಾಗದ ಆಸ್ತಿಯ ನಷ್ಟವನ್ನು ಉಂಟು ಮಾಡಿತ್ತು.

Similar News