×
Ad

ಆಮ್ ಆದ್ಮಿ ಪಕ್ಷ ಒಂದು ರೋಗ, ಅದನ್ನು ತೊಡೆದುಹಾಕಬೇಕು: ಬಿ.ಎಲ್. ಸಂತೋಷ್

Update: 2023-05-19 12:54 IST

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷವನ್ನು (ಎಎಪಿ)  ಒಂದು "ಗಂಭೀರ ಕಾಯಿಲೆ" ಎಂದು ಬಣ್ಣಿಸಿರುವ ,ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್(B.L. Santhosh ) ”ಇದು ರಾಷ್ಟ್ರ ರಾಜಧಾನಿಗೆ ಅಪಾಯಕಾರಿಯಾಗಿದೆ. ಈ ರೋಗವು ದೇಶಕ್ಕೆ ಅಪಾಯಕಾರಿಯಾಗದಂತೆ ನೋಡಿಕೊಳ್ಳಿ" ಎಂದು ಗುರುವಾರ ಇಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಆಮ್ ಆದ್ಮಿ ಪಕ್ಷ ಹುಟ್ಟಿದ ಸ್ಥಳದಿಂದ ಅದನ್ನು ತೊಡೆದುಹಾಕಲು ಪ್ರತಿಜ್ಞೆ ಮಾಡುವಂತೆಯೂ ಸಂತೋಷ್ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ದಿಲ್ಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಮಾರ್ಗಸೂಚಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ದಿನವಿಡೀ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಈ ಹೇಳಿಕೆ ನೀಡಿದರು.

ಎಎಪಿ ಸರಕಾರದ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತಲೇ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳಲು ಜನರ ಬಳಿಗೆ ಹೋಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕ ಹೇಳಿದ್ದಾರೆ.

ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ಸಂತೋಷ್, "ಒಂದು ಕಾಲದಲ್ಲಿ ಸಾಮಾನ್ಯ ಚಪ್ಪಲಿಯನ್ನು ಧರಿಸಿದ್ದ AAP ರಾಷ್ಟ್ರೀಯ ಸಂಚಾಲಕರು ಇಂದು ಅವರ ಸೌಕರ್ಯಕ್ಕಾಗಿ 109 ಕೋಣೆಗಳ ಶೀಶ್ ಮಹಲ್ ಅನ್ನು ನಿರ್ಮಿಸಿದ್ದಾರೆ.  ಎಎಪಿ ಭ್ರಷ್ಟಾಚಾರ ಹಾಗೂ  ಅರಾಜಕತೆಯಿಂದ ತುಂಬಿ ಹೋಗಿದೆ ಹಾಗೂ  ಕೇಜ್ರಿವಾಲ್ ಅವರ "ನಕಲಿ ಇಮೇಜ್" ಅನ್ನು ಹೊರ ತೆಗೆಯಲು ಬಿಜೆಪಿಯ ದಿಲ್ಲಿ  ಘಟಕ ಯಶಸ್ವಿಯಾಗಿದೆ ಎಂದು  ಶ್ಲಾಘಿಸಿದರು.  

Similar News