×
Ad

ಮಾಜಿ ಸಂಸದನ ಶೀಘ್ರ ಬಿಡುಗಡೆ ಕುರಿತು ಬಿಹಾರ ಸರಕಾರದಿಂದ ದಾಖಲೆಗಳನ್ನು ಕೇಳಿದ ಸುಪ್ರೀಂ ಕೋರ್ಟ್

Update: 2023-05-19 13:39 IST

ಹೊಸದಿಲ್ಲಿ: ಐಎಎಸ್ ಅಧಿಕಾರಿಯೊಬ್ಬರ ಹತ್ಯೆಗೆ ಕುಮ್ಮಕ್ಕು ನೀಡಿ ಜೈಲಿನಲ್ಲಿದ್ದ ದರೋಡೆಕೋರ- ರಾಜಕಾರಣಿ ಆನಂದ್ ಮೋಹನ್ ನನ್ನು ಶೀಘ್ರ ಬಿಡುಗಡೆ ಮಾಡಿರುವ ಕುರಿತಂತೆ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಬಿಹಾರ ಸರಕಾರಕ್ಕೆ ಸೂಚಿಸಿದೆ.

1994ರಲ್ಲಿ ಬಿಹಾರದ ಮಾಜಿ ಸಂಸದ ಆನಂದ್‌ ಮೋಹನ್‌ ನೇತೃತ್ವದ ಜನರ ಗುಂಪಿನಿಂದ ಹತ್ಯೆಗೀಡಾದ ತೆಲಂಗಾಣ ಮೂಲದ ಅಧಿಕಾರಿ ಜಿ.  ಕೃಷ್ಣಯ್ಯರ ಪತ್ನಿ ಬಿಡುಗಡೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಮೇ 8 ರಂದು ನಡೆದ ಕೊನೆಯ ವಿಚಾರಣೆಯಲ್ಲಿ ಆನಂದ್ ಮೋಹನ್ ನನ್ನು ಮುಂಚಿತವಾಗಿ ಬಿಡುಗಡೆ ಮಾಡಿರುವ ಕುರಿತಂತೆ  ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ಬಿಹಾರ ಸರಕಾರಕ್ಕೆ ನೋಟಿಸ್ ನೀಡಿತು.

Similar News