ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್ ನೀಡಿದ ಸುಪ್ರೀಂಕೋರ್ಟ್ ಸಮಿತಿ

Update: 2023-05-19 10:10 GMT

ಹೊಸದಿಲ್ಲಿ:  ಮೇಲ್ನೋಟಕ್ಕೆ ಅದಾನಿ ಗ್ರೂಪ್‌ನಿಂದ ಯಾವುದೇ ಉಲ್ಲಂಘನೆಯಾಗಿಲ್ಲ ಹಾಗೂ  ಮಾರುಕಟ್ಟೆ ನಿಯಂತ್ರಕ ಸೆಬಿಯ ಕಡೆಯಿಂದ ಯಾವುದೇ ನಿಯಂತ್ರಕ ವೈಫಲ್ಯವಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹಿಂಡೆನ್‌ಬರ್ಗ್ ಆರೋಪಗಳ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿ ಹೇಳಿದೆ. ಅದಾನಿ ಸಮೂಹಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು NDTV ವರದಿ ಮಾಡಿದೆ.

ಅಮೆರಿಕದ ಶಾರ್ಟ್ ಸೆಲ್ಲರ್ ವರದಿಯ ನಂತರ ಅದಾನಿ ಗ್ರೂಪ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯಗಳಿದ್ದರೆ  ತನಿಖೆ ನಡೆಸಲು ಭಾರತದ ಸರ್ವೋಚ್ಚ ನ್ಯಾಯಾಲಯವು  ಆರು ಸದಸ್ಯರನ್ನು ಒಳಗೊಂಡ ಸ್ವತಂತ್ರ ಸಮಿತಿ ರಚನೆಗೆ ನಿರ್ದೇಶಿಸಿತ್ತು.

ಮೊದಲ ನೋಟದಲ್ಲಿ ಅದಾನಿ ಗ್ರೂಪ್‌ನ ಕಡೆಯಿಂದ ಯಾವುದೇ ಬೆಲೆ ಕೈಚಳಕ  ನಡೆದಿಲ್ಲ ಎಂದು ತೋರುತ್ತದೆ ಎಂದು ಡೊಮೈನ್ ತಜ್ಞರ ಸುಪ್ರೀಂ ಕೋರ್ಟ್ ಸಮಿತಿಯು ತಿಳಿಸಿದೆ.

ಅದಾನಿ ಗ್ರೂಪ್ ಚಿಲ್ಲರೆ ಹೂಡಿಕೆದಾರರನ್ನು ಸಾಂತ್ವನಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಹಾಗೂ ಗ್ರೂಪ್  ತೆಗೆದುಕೊಂಡ ಕ್ರಮ ಷೇರುಗಳಲ್ಲಿ ವಿಶ್ವಾಸವನ್ನು ಬೆಳೆಸುವಲ್ಲಿ ಸಹಾಯ ಮಾಡಿದೆ ಎಂದು ಸಮಿತಿ ಹೇಳಿದೆ. ಷೇರುಗಳು ಈಗ ಸ್ಥಿರವಾಗಿವೆ ಎಂದು ಅದು ಗಮನಿಸಿದೆ.

Similar News