×
Ad

‘ಆಪರೇಷನ್ ಧ್ವಸ್ತ’: ಎನ್ಐಯಿಂದ ಮೂವರ ಬಂಧನ

Update: 2023-05-19 22:20 IST

ಹೊಸದಿಲ್ಲಿ,ಮೇ 19: ಭಯೋತ್ಪಾದಕ-ಗ್ಯಾಂಗ್ಸ್ಟರ್-ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರ ಜಾಲ ಪ್ರಕರಣಗಳಲ್ಲಿ ‘ಆಪರೇಷನ್ ಧ್ವಸ್ತ’ ಸಂಕೇತ ನಾಮದಡಿ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಬುಧವಾರ ಎಂಟು ರಾಜ್ಯಗಳಲ್ಲಿ ನಡೆಸಿದ ದಾಳಿಗಳಿಗೆ ಸಂಬಂಧಿಸಿದಂತೆ ಮೂವರನ್ನು ಎನ್ಐಎ ಬಂಧಿಸಿದೆ.

ಪಂಜಾಬ್ ಮತ್ತು ಹರ್ಯಾಣ ಪೊಲೀಸರ ಸಹಕಾರದೊಂದಿಗೆ ಸಂಘಟಿತ ಕಾರ್ಯಾಚರಣೆಯಲ್ಲಿ ಎನ್ಐಎ ಒಟ್ಟು 324 ಸ್ಥಳಗಳ ಪೈಕಿ 129 ಕಡೆಗಳಲ್ಲಿ ದಾಳಿಗಳನ್ನು ನಡೆಸಿತ್ತು. ಈ ಎರಡು ರಾಜ್ಯಗಳ ಜೊತೆಗೆ ದಿಲ್ಲಿ,ಉ.ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿಯೂ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಹರ್ಯಾಣದಿಂದ ಪ್ರವೀಣ ವಾಧ್ವಾ, ದಿಲ್ಲಿಯಿಂದ ಇರ್ಫಾನ್ ಮತ್ತು ಪಂಜಾಬಿನಿಂದ ಜಸ್ಸಾ ಸಿಂಗ್ ಎನ್ನುವವರನ್ನು ಎನ್ಐಎ ಬಂಧಿಸಿದೆ.

ಈ ಪ್ರಕರಣಗಳು ಉದ್ದೇಶಿತ ಹತ್ಯೆಗಳು,ಖಾಲಿಸ್ತಾನ್ ಪರ ಸಂಘಟನೆಗಳಿಂದ ಭಯೋತ್ಪಾದನೆಗೆ ಆರ್ಥಿಕ ನೆರವು,ಹಫ್ತಾವಸೂಲಿ ಇತ್ಯಾದಿಗಳಿಗೆ ಸಂಬಂಧಿಸಿದ ಪಿತೂರಿಗಳೊಂದಿಗೆ ತಳುಕು ಹಾಕಿಕೊಂಡಿವೆ. ಮಹಾರಾಷ್ಟ್ರದ ಬಿಲ್ಡರ್ ಸಂಜಯ ಬಿಯಾನಿ ಮತ್ತು ಪಂಜಾಬಿನಲ್ಲಿ ಕಳೆದ ವರ್ಷ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ ನಂಗಲ್ ಅಂಬಿಯಾ ಅವರ ಹತ್ಯೆಗಳು ಇವುಗಳಲ್ಲಿ ಗಮನಾರ್ಹ ಪ್ರಕರಣಗಳಾಗಿವೆ ಎಂದು ಎನ್ಐಎ ತಿಳಿಸಿದೆ.

Similar News