'ಬಿಲಿಯನ್‌ ಡಾಲರ್‌ ಧೋಕಾʼ: 2000 ರೂ. ನೋಟು ಚಲಾವಣೆಯಿಂದ ಹಿಂಪಡೆದ ಕ್ರಮಕ್ಕೆ ಮಮತಾ ಟೀಕೆ

Update: 2023-05-20 08:53 GMT

ಹೊಸದಿಲ್ಲಿ: ರೂ. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿರ್ಧಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಇದು ʻಬಿಲಿಯನ್‌ ಡಾಲರ್‌ ಧೋಕಾʼ ಎಂದು ಅವರು ಬಣ್ಣಿಸಿದ್ದಾರಲ್ಲದೆ ಇಂತಹ ಕ್ರಮಕೈಗೊಂಡವರನ್ನು ಜನರು ಕ್ಷಮಿಸುವುದಿಲ್ಲ ಎಂದಿದ್ದಾರೆ.

“ಹಾಗಿದ್ದರೆ ಅದು ರೂ. 2000 ಧಮಾಕಾ ಆಲ್ಲ ಬದಲು ಲಕ್ಷಾಂತರ ಭಾರತೀಯರಿಗೆ ಬಿಲಿಯನ್‌ ಡಾಲರ್‌ ಧೋಕಾ ಆಗಿದೆ. ನನ್ನ ಪ್ರೀತಿಯ ಸಹೋದರ, ಸಹೋದರಿಯರೇ ಎಚ್ಚರಗೊಳ್ಳಿ. ಅಮಾನ್ಯೀಕರಣದಿಂದ ನಾವು ಅನುಭವಿಸಿದ ಕಷ್ಟವನ್ನು ಮರೆಯಲು ಸಾಧ್ಯವಿಲ್ಲ ಹಾಗೂ ಇಂತಹ ಕಷ್ಟವನ್ನು ನಮಗೆ ನೀಡಿದವರನ್ನು ಕ್ಷಮಿಸಬಾರದು,” ಎಂದು ಬ್ಯಾನರ್ಜಿ ಅವರು ಟ್ವೀಟ್‌ ಮೂಲಕ ಹೇಳಿದ್ದಾರೆ.

Similar News