×
Ad

ಸಚಿನ್ ಪೈಲಟ್ ಅವರ ಜನಸಂಘರ್ಷ್ ಯಾತ್ರೆಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ: ಕಾಂಗ್ರೆಸ್ ರಾಜಸ್ಥಾನದ ಉಸ್ತುವಾರಿ ರಾಂಧವ

Update: 2023-05-21 10:11 IST

ಜೈಪುರ: ಗೆಹ್ಲೋಟ್-ಪೈಲಟ್ ಜಗಳದ ನಡುವೆ, ಮೇ 15 ರಂದು ಮುಕ್ತಾಯಗೊಂಡ ಸಚಿನ್ ಪೈಲಟ್ ಅವರ ಜನಸಂಘರ್ಷ್ ಯಾತ್ರೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ರಾಜಸ್ಥಾನದ ಉಸ್ತುವಾರಿ ಸುಖಜಿಂದರ್ ಸಿಂಗ್ ರಾಂಧವಾ ಅವರು ಶನಿವಾರ ಹೇಳಿದ್ದಾರೆ.

"ಇದು  ಪೈಲಟ್ ಅವರ ಯಾತ್ರೆ. ಕಾಂಗ್ರೆಸ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಸಿಎಂ ಹಾಗೂ  ಇತರ ಹಿರಿಯ ನಾಯಕರ ಮುಂದೆ ರಾಜ್ಯಮಟ್ಟದ ಚರ್ಚೆ ನಡೆಯಬೇಕು. ಆದರೆ ಕರ್ನಾಟಕ ಚುನಾವಣೆಗೆ ಮುನ್ನ ಯಾತ್ರೆ ನಡೆಸಿರುವುದು ಒಳ್ಳೆಯದಲ್ಲ" ಎಂದು ರಾಂಧವ ಹೇಳಿದ್ದಾರೆ. .

ರಾಜಕೀಯದಲ್ಲಿ ಶಾಶ್ವತ ಮಿತ್ರರು ಅಥವಾ ಶತ್ರುಗಳಿಲ್ಲ. ನಾವು ಸಚಿನ್ ಪೈಲಟ್ ಜೊತೆ ಮಾತನಾಡುತ್ತೇವೆ" ಎಂದು ರಾಂಧವ ಹೇಳಿದರು.

ಪೈಲಟ್ ಇತ್ತೀಚೆಗೆ ತಮ್ಮ ಯಾತ್ರೆಯನ್ನು ಮುಗಿಸಿದರು ಹಾಗೂ  ರಾಜ್ಯದಲ್ಲಿ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಅಶೋಕ್ ಗೆಹ್ಲೋಟ್‌ಗೆ 15 ದಿನಗಳ ಗಡುವು ನೀಡಿದರು.

ಮೇ 31ರ ವರೆಗೆ ಸಿಎಂ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕಿದ್ದಾರೆ.

ಪೈಲಟ್ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳ ವಿರುದ್ಧ ಕ್ರಮ, ರಾಜಸ್ಥಾನ ಲೋಕಸೇವಾ ಆಯೋಗದ (ಆರ್‌ಪಿಎಸ್‌ಸಿ) ವಿಸರ್ಜನೆ ಹಾಗೂ  ಅದರ ಪುನರ್ ರಚನೆ, ಮತ್ತು ಪೇಪರ್ ಸೋರಿಕೆಯಿಂದ ಹಾನಿಗೊಳಗಾದವರಿಗೆ ಪರಿಹಾರ ಹಾಗೂ ಈ ತಿಂಗಳ ಅಂತ್ಯದೊಳಗೆ ಕ್ರಮಕ್ಕೆ ಒತ್ತಾಯಿಸಿದರು.

Similar News