ಕೃತಕ ಕಾಲಿನಿಂದ ಎವರೆಸ್ಟ್ ಶಿಖರವೇರಿ ಚರಿತ್ರೆ ನಿರ್ಮಿಸಿದ ಮಾಜಿ ನೇಪಾಳಿ ಯೋಧ

Update: 2023-05-21 12:52 GMT

ಕಠ್ಮಂಡು: ಎರಡೂ ಕೃತಕ ಕಾಲುಗಳೊಂದಿಗೆ ಎವರೆಸ್ಟ್ ಶಿಖರವೇರುವ ಮೂಲಕ ಮಾಜಿ ಬ್ರಿಟಿಷ್ ನೇಪಾಳಿ ಯೋಧರೊಬ್ಬರು ವಿಶ್ವದ ಅತಿ ಎತ್ತರದ ಶಿಖರವೇರಿದ ಚರಿತ್ರೆ ನಿರ್ಮಿಸಿದ್ದಾರೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

43 ವರ್ಷ ವಯಸ್ಸಿನ ಹರಿ ಬುದ್ಧಮಗರ್ ಶುಕ್ರವಾರ ಮಧ್ಯಾಹ್ನ 8848.86 ಮೀಟರ್ ಎತ್ತರದ ಎವರೆಸ್ಟ್ ಶಿಖರವೇರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, "ಎರಡು ಕಾಲುಗಳೂ ಊನವಾಗಿರುವ ಮಾಜಿ ಯೋಧ ಬುದ್ಧಮಗರ್ ಕೃತಕ ಕಾಲುಗಳಿಂದ ಎವರೆಸ್ಟ್ ಶಿಖರವೇರುವ ಮೂಲಕ ಆ ವರ್ಗದಲ್ಲಿ ಚರಿತ್ರೆ ನಿರ್ಮಿಸಿದ್ದಾರೆ" ಎಂದು ತಿಳಿಸಿದ್ದಾರೆ.

2010ರಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದಿದ್ದ ಯುದ್ಧದ ಸಂದರ್ಭದಲ್ಲಿ ಬ್ರಿಟನ್ ಸರ್ಕಾರದ ಬ್ರಿಟಿಷ್ ಗೂರ್ಖಾ ಯೋಧರಾಗಿದ್ದ ಬುದ್ಧಮಗರ್ ತಮ್ಮ ಎರಡು ಕಾಲುಗಳನ್ನೂ ಕಳೆದುಕೊಂಡಿದ್ದರು. ಅವರೀಗ ಕೃತಕ ಕಾಲುಗಳಿಂದ ಎವರೆಸ್ಟ್ ಶಿಖರವೇರಿದ್ದಾರೆ.

ನೇಪಾಳವು ವಿಶ್ವದ ಹತ್ತು ಅತಿ ಎತ್ತರದ ಶಿಖರಗಳ ಪೈಕಿ ಎಂಟು ಶಿಖರಗಳನ್ನು ತನ್ನಲ್ಲಿ ಹೊಂದಿದೆ.

Similar News