ಕುಂದಾಪುರ: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
Update: 2023-05-21 20:22 IST
ಕುಂದಾಪುರ: ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಆಯತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಮೇ 21ರಂದು ಬೆಳಗ್ಗೆ ಕೋಟೇಶ್ವರ ಗ್ರಾಮದ ಹಳೆ ಅಳಿವೆ ಎಂಬಲ್ಲಿ ನಡೆದಿದೆ.
ಮೃತರನ್ನು ಕೋಟೇಶ್ವರ ಗ್ರಾಮದ ಹಳೆಅಳಿವೆ ನಿವಾಸಿ ನಾಗರಾಜ (30) ಎಂದು ಗುರುತಿಸಲಾಗಿದೆ.
ಇವರು ರಾಜು ಪೂಜಾರಿ ಎಂಬವರ ಮಾಲಕತ್ವದ ಕೋಟೀಲಿಂಗೇಶ್ವರ ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅಲ್ಲಿ ಇತರರೊಂದಿಗೆ ಕೈರಂಪಣಿ ಬಲೆ ಬೀಸಿ ಮೀನುಗಾರಿಕೆ ಮಾಡುವಾಗ ಒಮ್ಮೆಲೆ ಸಮುದ್ರದ ನೀರಿನ ರಭಸಕ್ಕೆ ದೋಣಿ ತೇಲಾಡಿ ಮೀನುಗಾರಿಕೆ ಮಾಡಿಕೊಂಡಿದ್ದ ನಾಗರಾಜ ಆಕಸ್ಮಿಕವಾಗಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.