×
Ad

ಸಿಇಟಿ: ಉಡುಪಿಯಲ್ಲಿ ಭೌತಶಾಸ್ತ್ರಕ್ಕೆ 255, ರಸಾಯನಶಾಸ್ತ್ರಕ್ಕೆ 250 ವಿದ್ಯಾರ್ಥಿಗಳು ಗೈರು

Update: 2023-05-21 20:43 IST

ಉಡುಪಿ, ಮೇ 21: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇಂಜಿನಿಯ ರಿಂಗ್ ಹಾಗೂ ಇತರ ಕೋರ್ಸ್‌ಗಳಿಗೆ ಪ್ರವೇಶ ಒದಗಿಸಲು ಎರಡನೇ ದಿನವಾದ ರವಿವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿ ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆಗಳು ನಡೆದವು.

ಭೌತಶಾಸ್ತ್ರ ಪರೀಕ್ಷೆಗೆ 2666 ಬಾಲಕರು ಮತ್ತು 3036 ಬಾಲಕಿಯರು ಸೇರಿ ದಂತೆ ಒಟ್ಟು 5702 ವಿದ್ಯಾರ್ಥಿ ಗಳು ಹೆಸರು ನೊಂದಾಯಿಸಿದ್ದು, ಇದರಲ್ಲಿ 2571 ಬಾಲಕರು ಮತ್ತು 2876 ಬಾಲಕರು ಸೇರಿದಂತೆ ಒಟ್ಟು 5447 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪರೀಕ್ಷೆಗೆ 104 ಬಾಲಕರು ಮತ್ತು 151 ಬಾಲಕಿಯರು ಸೇರಿದಂತೆ 255 ಮಂದಿ ಗೈರು ಹಾಜರಾಗಿದ್ದರು.

ರಸಾಯನಶಾಸ್ತ್ರ ಪರೀಕ್ಷೆಗೆ 2668 ಬಾಲಕರು ಮತ್ತು 3034 ಬಾಲಕಿಯರು ಸೇರಿ ದಂತೆ ಒಟ್ಟು 5702 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, ಇದರಲ್ಲಿ 2569 ಬಾಲಕರು ಮತ್ತು 2873 ಬಾಲಕರು ಸೇರಿದಂತೆ ಒಟ್ಟು 5442 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪರೀಕ್ಷೆಗೆ 99 ಬಾಲಕರು ಮತ್ತು 161 ಬಾಲಕಿಯರು ಸೇರಿದಂತೆ 250 ಮಂದಿ ಗೈರು ಹಾಜರಾಗಿದ್ದರು ಎಂದು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Similar News