ಉಡುಪಿ ನಾಗರಿಕ ಸಮಿತಿಯಿಂದ ಸಭಾಪತಿಗೆ ಶ್ರದ್ಧಾಂಜಲಿ
ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಅಗಲಿದ ಉಡುಪಿಯ ಮಾಜಿ ಶಾಸಕ ಯು.ಆರ್. ಸಭಾಪತಿ ಅವರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ನಗರದ ಮಾರುತಿ ವೀಥಿಕಾದಲ್ಲಿ ಸೋಮವಾರ ಆಯೋಜಿಲಾಗಿತ್ತು.
ಹಿರಿಯ ಮನೋವೈದ್ಯ ಡಾ.ಪಿ.ವಿಭಂಡಾರಿ, ವಿಮರ್ಶಕ ಮುರಳೀಧರ್ ಉಪಾಧ್ಯ, ಸಮಾಜ ಸೇವಕ ಕೆ.ಕೃಷ್ಣ ಮೂರ್ತಿ ಆಚಾರ್ಯ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನುಡಿನಮನ ಸಲ್ಲಿಸಿದರು.
ಉಡುಪಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರನೊಲ್ಡೋ ಪ್ರವೀಣ್, ಕೇರಳ ಕಲ್ಚರಲ್ ಎಂಡ್ ಸೋಶಿಯಲ್ ಸೆಂಟರಿನ ಸುಗುಣ ಕುಮಾರ್, ಬಿನೇಶ್, ಮಲಬಾರ್ ಗೊಲ್ಡ್‌ನ ಗ್ರಾಹಕ ಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್, ಜೋಸ್ ಆಲೂಕಾಸ್ ಸಹಾಯಕ ವ್ಯವಸ್ಥಾಪಕ ಗೋಪಾಲ್, ಉದ್ಯಮಿ ಉದಯ ಕುಮಾರ್, ಸಾಂಸ್ಕೃತಿಕ ಪ್ರತಿನಿಧಿ ಸುಧಾಕರ್ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಚರಣ್ ಬಂಗೇರ, ನಾಗರಿಕ ಸಮಿತಿಯ ಸದಸ್ಯರಾದ ಕೆ.ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು, ಪ್ರಸಾದ್ ಶೆಟ್ಟಿ, ಗುರುರಾಜ್ ಆಚಾರ್ಯ ಕಿನ್ನಿಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು.